ಬೆಂಗಳೂರು, ಜ.20 (DaijiworldNews/PY): "ಬಿಜೆಪಿ ನಾಯಕರಿಗೆ ಅಮಿತ್ ಶಾ ಅವರ ಮುಂದೆ ಮಾತನಾಡುವಷ್ಟು ಧೈರ್ಯವಿಲ್ಲ" ಎಂದು ಮಾಜಿ ಸಚಿವ ಬಂಡೆಪ್ಪ ಕಾಂಶೆಪೂರ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, "ಕರ್ನಾಟಕ ರಾಜ್ಯದಲ್ಲಿ ಆಡಳಿತ ಭಾಷೆಯೆಂದರೆ ಕನ್ನಡ. ತಮಿಳುನಾಡಿಗೆ ಹೋದರೆ ಅಲ್ಲಿ ತಮಿಳು ಬಿಟ್ಟರೆ ಬೇರೆ ಇಲ್ಲ. ಇಲ್ಲೀ ಕೂಡಾ ಅದೇ ರೀತಿ ಇರಬೇಕಲ್ಲಾ?" ಎಂದು ಪ್ರಶ್ನಿಸಿದ್ದಾರೆ.
"ಇದರಲ್ಲಿ ಪ್ರೊಟೋಕಾಲ್ ಇರಬಹುದು. ಆದರೆ, ಕನ್ನಡ ಹಾಕಬಾರದು ಎಂದು ಎಲ್ಲಿಯಾದರೂ ಹೇಳಿದ್ದಾರಾ?. ಈ ವಿಚಾರವನ್ನು ನಾನು ಖಂಡಿಸುತ್ತೇನೆ" ಎಂದಿದ್ದಾರೆ.
ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಅವರು ನೀಡಿರುವ ಹೇಳಿಕೆ ಉದ್ದಟತನದ ಹೇಳಿಕೆಯಾಗಿದೆ. ನೆಲ, ಜಲ, ಭಾಷೆ ವಿಚಾರ ಬಂದರೆ ನಾವೆಲ್ಲರೂ ಒಂದೇ. ಇದಕ್ಕೆ ಧಕ್ಕೆ ಉಂಟಾದರೆ ನಾವು ಹೋರಾಟಕ್ಕೂ ಸಿದ್ದ" ಎಂದು ತಿಳಿಸಿದ್ದಾರೆ.