ಮೈಸೂರು, ಜ.20 (DaijiworldNews/PY): ಅಯೋಧ್ಯೆಯಲ್ಲಿ ಭವ್ಯವಾದ ರಾಮ ದೇವಾಲಯ ನಿರ್ಮಾಣದ ಸಲುವಾಗಿ ಕೊಡುಗೆ ನೀಡಲು ಮೈಸೂರು ಪ್ರದೇಶದ ಪ್ರಮುಖ ಧಾರ್ಮಿಕ ಮಠಗಳು ಹಾಗೂ ಮುಖ್ಯಸ್ಥರು ಕೈಜೋಡಿಸಿದ್ದು, ಹಿಂದೂ ಧರ್ಮದಲ್ಲಿರುವ ಅಸ್ಪೃಶ್ಯತೆ ವಿರುದ್ದ ಹೋರಾಡಲು ಕರೆ ನೀಡಿದ್ದಾರೆ.
ಜೆ.ಎಸ್.ಎಸ್ ಮಠದ ಶಿವಕುಮಾರ ದೇಶೀಕೇಂದರ ಸ್ವಾಮೀಜಿ ಅವರನ್ನು ಭೇಟಿಯಾದ ಹಲವು ಶ್ರೀಗಳು, ಹಿಂದೂ ಧರ್ಮದಲ್ಲಿರುವ ಅಸ್ಪೃಶ್ಯತೆಯ ವಿರುದ್ದ ಹೋರಾಡುವಂತೆ ತಿಳಿಸಿದ್ದಾರೆ.
"ಅಯೋಧ್ಯೆಯು ಹಿಂದೂಗಳ ಸಾಂಸ್ಕೃತಿಕ ಹಾಗೂ ಸ್ವಾಭಿಮಾನದ ಸಂಕೇತ. ಸ್ವಾತಂತ್ರ್ಯದ ಬಳಿ ಸರ್ಕಾರ ಬಂದು ಸಮಾಧಾನಪಡಿಸುವ ಬದಲಾಗಿ ಮಂದಿರದ ನಿರ್ಮಾಣದ ಕಾರ್ಯವಾಗಬೇಕಿತ್ತು" ಎಂದು ವಿಎಚ್ ಪಿ ಸಂಘಟನಾ ಕಾರ್ಯದರ್ಶಿ ಬಸವರಾಜ ಹೇಳಿದರು.
"ಮಹಾತ್ಮ ಗಾಂಧೀಜಿಯವರ ಇಚ್ಛೆಯನುಸಾರ ಸರ್ದಾರ್ ಪಟೇಲ್ ಸಾರ್ವಜನಿಕ ಹಣವನ್ನು ಉಪಯೋಗಿಸಿಕೊಂಡು ಸೋಮನಾಥ ದೇವಸ್ಥಾನವನ್ನು ನಿರ್ಮಾಣ ಮಾಡಿದರು. ಕಾಶಿ ಹಾಗೂ ಇತರೆ ದೇವಾಲಯಗಳಲ್ಲೀ ಕೂಡಾ ಇದೇ ರೀತಿ ಮಾಡಿದ್ದಾರೆ" ಎಂದರು.
"ರಾಮ ಮಂದಿರದ ನಿರ್ಮಣಕ್ಕಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಸರ್ಕಾರದ ಹಣವನ್ನು ಅಥವಾ ಓರ್ವ ವ್ಯಕ್ತಿಯಿಂದ ಸ್ವೀಕರಿಸದಿರಲು ತೀರ್ಮಾನ ಮಾಡಿದೆ. ದೇವಸ್ಥಾನಕ್ಕೆ ಹಣ ಸಂಗ್ರಹಿಸುವ ನಿಟ್ಟಿನಲ್ಲಿ ಶೇ.60ರಷ್ಟು ಹಿಂದೂಗಳನ್ನು ಭೇಟಿಯಾಗುವ ಯೋಜನೆ ಇದೆ" ಎಂದರು.