ಜಲ್ಪೈಗುರಿ, ಜ.20 (DaijiworldNews/MB) : ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಧುಪ್ಗುರಿ ನಗರದಲ್ಲಿ ಕಳೆದ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು 13 ಮಂದಿ ಮೃತಪಟ್ಟಿದ್ದಾರೆ.
ದಟ್ಟ ಮಂಜು ಆವರಿಸಿದ ಕಾರಣ ಸರಿಯಾಗಿ ದಾರಿ ಕಾಣಿಸದೆ ಈ ಅಪಘಾತ ಸಂಭವಿಸಿರಬಹುದು ಎಂದು ಹೇಳಲಾಗಿದೆ. ಅಪಘಾತದಲ್ಲಿ 13 ಮಂದಿ ಸಾವನಪ್ಪಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಜರಾತ್ನ ಕೋಸಂಬಾದಲ್ಲಿ ಟ್ರಕ್ ಹರಿದು 13 ಮಂದಿ ಸಾವನಪ್ಪಿದ ಘಟನೆ ಮಂಗಳವಾರ ನಡೆದಿತ್ತು.