ಬೆಂಗಳೂರು, ಜ.20 (DaijiworldNews/MB) : ''ಮುಖ್ಯಮಂತ್ರಿ ಯಡಿಯೂರಪ್ಪರ ತೀರ್ಮಾನದಂತೆ ಸಂಪುಟ ವಿಸ್ತರಣೆ ನಡೆದಿದ್ದು ಮೂರು ತಿಂಗಳ ನಂತರ ಸಂಪುಟ ಪುನರ್ರಚನೆ ಮಾಡುವ ಯಾವುದೇ ಪ್ರಸ್ತಾವವಿಲ್ಲ'' ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.
''ಯಾರಿಗೆ ಯಾವ ಖಾತೆ ನೀಡಬೇಕು ಎಂಬುದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ವರಿಷ್ಠರು ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡಲ್ಲ. ನಾವು ಈ ಬಗ್ಗೆ ಯಾವುದೇ ನಿರ್ದೇಶನವನ್ನು ನೀಡಿಲ್ಲ, ನೀಡುವುದೂ ಇಲ್ಲ'' ಎಂದು ಹೇಳಿದರು.
''ವರಿಷ್ಠರ ಪಟ್ಟಿಯನ್ನು ಯಡಿಯೂರಪ್ಪ ಬದಲಾಯಿಸಿದರು. ಮೂಲ ಬಿಜೆಪಿಯವರಿಗೆ ಅವಕಾಶ ದೊರೆತಿಲ್ಲ ಎಂಬ ಶಾಸಕರ ಟೀಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪಟ್ಟಿ ಕಳಿಸಿಲ್ಲ ಎಂದ ಮೇಲೆ ಅದನ್ನು ಬದಲಾಯಿಸುವುದು ಹೇಗೆ? ಇತಿಮಿತಿಯಲ್ಲಿ ವಿಸ್ತರಣೆ ಮಾಡಬೇಕಾದಾಗ ಸಣ್ಣಪುಟ್ಟ ಅಸಮಾಧಾನ ಸಹಜವಾದದ್ದು. ಮಾತುಕತೆಯಲ್ಲಿ ಬಗೆಹರಿಸುತ್ತೇವೆ'' ಎಂದು ತಿಳಿಸಿದರು.