ಉಡುಪಿ, ಜ 19 (DaijiworldNews/SM): ರಾಜ್ಯದಲ್ಲಿ ಈಗಾಗಲೇ ಸಚಿವ ಸಂಪುಟ ವಿಸ್ತರಣೆ ಕಾರ್ಯ ನಡೆದಿದ್ದು, ನೂತನವಾಗಿ ಏಳು ಮಂದಿಯನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಲಾಗಿದೆ. ನೂತನವಾಗಿ ಆಯ್ಕೆಯಾಗಿರುವ ಸಚಿವರಿಗೆ ಒಂದೆರಡು ದಿನಗಳಲ್ಲಿ ಖಾತೆ ಹಂಚಿಕೆ ಮಾಡಲಾಗುವುದೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಉಡುಪಿ ಪ್ರವಾಸವನ್ನು ಕೈಗೊಂಡು ಬೆಂಗಳೂರಿಗೆ ಮರಳುವ ಸಂದರ್ಭ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಈಗಾಗಲೇ ರಾಜ್ಯದ ಜನತೆಯ ಹಾಗೂ ಶಾಸಕರ ನಿರೀಕ್ಷೆಯಂತೆ ಸಂಪುಟ ವಿಸ್ತರಣೆ ಮಾಡಲಾಗಿದೆ. ನೂತನವಾಗಿ ೭ ಶಾಸಕರನ್ನು ಸಚಿವರನ್ನಾಗಿಸಲಾಗಿದೆ. ನೂತನವಾಗಿ ಆಯ್ಕೆಯಾವರಿಗೆ ಶೀಘ್ರದಲ್ಲೇ ಖಾತೆಗಳನ್ನು ನೀಡಲಾಗುವುದು. ಅದರ ಬೆನ್ನಲ್ಲೇ ವಿಧಾನಮಂಡಲ ಅಧಿವೇಶನ ಕರೆದು ರಾಜ್ಯದ ಸಂಪೂರ್ಣ ಅಭಿವೃದ್ಧಿಗೆ ಶ್ರಮಿಸಲಾಗುವುದೆಂದು ತಿಳಿಸಿದ್ದಾರೆ.