ಕೊಲ್ಕತ್ತಾ, ಜ 19 (DaijiworldNews/SM): ಪಶ್ಚಿಮ ಬಂಗಾಳದಲ್ಲಿ ಚುನಾವಾಣೆಗೆ ಪ್ರಮುಖ ಪಕ್ಷಗಳು ಸಿದ್ಧತೆಗಳನ್ನು ನಡೆಸುತ್ತಿದ್ದು, ಪರಸ್ಪರ ಮಾತಿನ ದಾಳಿ ನಡೆಸುತ್ತಿವೆ. ಇದೀಗ ಸಿಎಂ ಮಮತಾ ಬ್ಯಾನರ್ಜಿಯವರು ಬಿಜೆಪಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಾವೋವಾದಿಗಳಿಗಿಂತಲೂ ಬಿಜೆಪಿ ಅಪಾಯಕಾರಿ ಎಂದು ಮಮತಾ ಬ್ಯಾನರ್ಜಿ ಕಿಡಿ ಖಾರಿದ್ದಾರೆ.
ಬಿಜೆಪಿ ಪಕ್ಷ ಚುನಾವಣೆಗೆ ಮುನ್ನ ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ಆ ಮೂಲಕ ಜನರನ್ನು, ಮತಗಳಾನ್ನು ಗಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಪಕ್ಷದ ರ್ಯಾಲಿಯೊಂದರಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಬಿಜೆಪಿಯನ್ನು ಹಿಗ್ಗಾಮುಗ್ಗ ತರಾಟೆಗೆತ್ತಿಕೊಂಡಿದ್ದಾರೆ.
ರಾಜಕೀಯ ಎಂದಿಗೂ ಗಂಭೀರ ಸಿದ್ಧಾಂತ ಮತ್ತು ತತ್ವಶಾಸ್ತ್ರದ ಮೇಲೆ ನಿಂತಿದೆ. ಯಾರೂ ಬಟ್ಟೆಯಂತೆ ಸಿದ್ಧಾಂತಗಳನ್ನು ಮನಬಂದಂತೆ ಬದಲಾಯಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.