ನವದೆಹಲಿ, ಜ 19 (DaijiworldNews/SM): ಕೇಂದ್ರ ಸರಕಾರದ ಬಹುನಿರೀಕ್ಷಿತ ಬಜೆಟ್ ಅಧಿವೇಶನ ಜನವರಿ 29ರಿಂದ ಆರಂಭವಾಗಲಿದೆ. ಈ ವೇಳೆ ಸಂಸತ್ ಭವನದಲ್ಲಿರುವ ಕ್ಯಾಂಟೀನ್ ಆಹಾರದ ಮೇಲಿನ ಸಬ್ಸಿಡಿಯನ್ನು ರದ್ದುಗೊಳಿಸಲಾಗಿದೆ.
ಸಂಸತ್ ಸದಸ್ಯರು ಮತ್ತು ಇತರರಿಗೆ ಸಂಸತ್ ಕ್ಯಾಂಟೀನ್ ನಲ್ಲಿ ಈ ಹಿಂದೆ ನೀಡಲಾಗುತ್ತಿದ್ದ ಆಹಾರದ ಮೇಲಿನ ಸಬ್ಸಿಡಿ ಈ ಬಾರಿ ರದ್ದುಗೊಳಿಸಲಾಗಿದೆ ಎಂಬುವುದಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ತಿಳಿಸಿದ್ದಾರೆ.
ಸರಕಾರದ ಈ ಕ್ರಮಕ್ಕೆ ಆರ್ಥಿಕ ಸಂಕಷ್ಟ ಕಾರಣ ಎಂದು ಬಿರ್ಲಾ ಅವರು ನಿರ್ದಿಷ್ಟವಾಗಿ ಹೇಳದಿದ್ದರೂ, ಲೋಕಸಭಾ ಸಚಿವಾಲಯವು ಕ್ಯಾಂಟೀನ್ ಸಬ್ಸಿಡಿಗಾಗಿ ವಾರ್ಷಿಕ 8 ಕೋಟಿ ರೂ.ಗಳಿಗಿಂತ ಹೆಚ್ಚು ಹಣ ಖರ್ಚು ಮಾಡುತ್ತಿತ್ತು. ಸದ್ಯ ಕೊರೋನಾ ಬಿಸಿ ತಟ್ಟಿದ ಬಳಿಕ ಆರ್ಥಿಕ ಸಂಕಷ್ಟ ಎದುರಾಗಿರುವುದರಿಂದ ಸಬ್ಸಿಡಿ ರದ್ದುಪಡಿಸಲಾಗಿರಬಹುದೆಂದು ಅಂದಾಜಿಸಲಾಗಿದೆ