ಬೆಂಗಳೂರು,ಜ.19 (DaijiworldNews/HR): "ಬಿ.ಎಸ್ ಯಡಿಯೂರಪ್ಪ ಸಂಪುಟದಲ್ಲಿರುವ ಎಲ್ಲಾ 32 ಸಚಿವರನ್ನೂ ತೆಗೆದು, ನೂತನವಾಗಿ ಸಂಪುಟ ರಚನೆ ಮಾಡಿ" ಎಂದು ದೇವದುರ್ಗ ಶಾಸಕ ಶಿವನಗೌಡ ನಾಯಕ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಂಪೂರ್ಣ ಸಂಪುಟವನ್ನೇ ಪುನಾರಚಿಸಿ, ಹಿರಿತನದ ಆಧಾರದ ಮೇಲೆ 32 ಹೊಸ ಶಾಸಕರುಗಳಿಗೆ ಸಂಪುಟದಲ್ಲಿ ಅವಕಾಶ ಕೊಡಿ" ಎಂದರು.
ಇನ್ನು "ಎಲ್ಲಾ ಜಿಲ್ಲೆ ಸಾಮಾಜಿಕ ಪ್ರಾತಿನಿಧ್ಯದಂತೆ ಸಚಿವರನ್ನು ಮಾಡಬೇಕು, ಕೆಳ ಹಂತದ ನಾಯಕರಿಗೆ ಅವಕಾಶ ನೀಡಬೇಕಿ. ಇದು ನಮ್ಮ ಮೂಲೆ ಮೂಲೆಯ ಶಾಸಕರ ಅಭಿಪ್ರಾಯ" ಎಂದು ಹೇಳಿದ್ದಾರೆ.