ಹುಬ್ಬಳ್ಳಿ, ಜ.19 (DaijiworldNews/PY): ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಅವರ ಬಗ್ಗೆ ಹಗುರವಾಗಿ ಮಾತನಾಡಿದ ವಿಚಾರವನ್ನು ಖಂಡಿಸಿ ವೈದ್ಯಕೀಯ ಶಿಕ್ಷಣ ಸಚಿವ ಡಾಕೆ.ಸುಧಾಕರ್ ಅವರ ವಾಹನಕ್ಕೆ ಕರವೇ ಕಾರ್ಯಕರ್ತರು ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿಯ ಕಿಮ್ಸ್ನಲ್ಲಿ ಪ್ರಗತಿ ಪರಿಶೀಲನೆ ಸಭೆ ಮುಗಿಸಿ ಬರುತ್ತಿದ್ದ ಸಂದರ್ಭ ಕಾರ್ಯಕರ್ತರು ಕಪ್ಪುಪಟ್ಟಿ ಪ್ರದರ್ಶಿಸಿ ಸಚಿವರ ವಿರುದ್ದ ಘೋಷಣೆ ಕೂಗಿದ್ದು ಅಲ್ಲದೇ, ಸಚಿವರ ವಾಹನಕ್ಕೆ ಅಡ್ಡಲಾಗಿ ಮಲಗಿ ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದಾರೆ.
ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿದ್ದು, ಪ್ರತಿಭಟನಾಕಾರರನ್ನು ಬದಿಗೆ ಸರಿಸಿ ಸಚಿವರ ವಾಹನ ಸಂಚಾರಕ್ಕೆ ದಾರಿ ಮಾಡಿಕೊಟ್ಟರು.