ಹೈದರಾಬಾದ್,ಜ.19 (DaijiworldNews/HR): ಕೊರೊನಾ ಲಸಿಕೆ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಆರಂಭಿಸಿ ಎರಡು ದಿನಗಳಷ್ಟೇ ಕಳೆದಿದ್ದು, ಇದೀಗ ಲಸಿಕೆ ತಯಾರಕ ಕಂಪನಿ ಭಾರತ್ ಬಯೋಟೆಕ್, ಯಾರೆಲ್ಲ ಕೋವ್ಯಾಕ್ಸಿನ್ ಲಸಿಕೆಯನ್ನು ತೆಗೆದುಕೊಳ್ಳಬಾರದು ಎಂಬುದರ ಕುರಿತು ತಿಳಿಸಿದೆ.
ಭಾರತ್ ಬಯೋಟೆಕ್ ಕಂಪೆನಿ ಕೋವಾಕ್ಸಿನ್ನ ಫ್ಯಾಕ್ಟ್ ಶೀಟ್ ಅನ್ನು ತನ್ನ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಿದ್ದು, ಮೊದಲನೆಯದಾಗಿ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರು, ಅಲರ್ಜಿಯನ್ನು ಹೊಂದಿರುವವರು, ಜ್ವರ, ರಕ್ತಸ್ರಾವದ ಕಾಯಿಲೆ, ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಚಿಕಿತ್ಸೆ ಪಡೆಯುತ್ತಿರುವವರು, ಗರ್ಭಿಣಿ ಮತ್ತು ಸ್ತನ್ಯಪಾನ ಮಾಡಿಸುವ ಮಹಿಳೆಯರು ಅಥವಾ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವವರು, ಈಗಾಗಲೇ ಮತ್ತೊಂದು ಕೊರೊನಾ ಲಸಿಕೆ ಪಡೆದವರಿಗೆ, ಉಸಿರಾಟದ ತೊಂದರೆ, ಮುಖ ಮತ್ತು ಗಂಟಲಿನ ಊತ, ವೇಗವಾದ ಹೃದಯ ಬಡಿತ ಇರುವವರು ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದುಕೊಳ್ಳಬಾರದು" ಎಂದು ಹೇಳಿದೆ.
ಇನ್ನು ಫ್ಯಾಕ್ಟ್ ಶೀಟ್ ಪ್ರಕಾರ, ಕೊರೊನಾ ಲಸಿಕೆಯನ್ನು ಪಡೆದವರಲ್ಲಿ ನೋವು, ಚುಚ್ಚುಮದ್ದು ಪಡೆದ ಜಾಗದಲ್ಲಿ ಊತ ಅಥವಾ ತುರಿಕೆ, ಆಯಾಸ, ದೇಹದ ನೋವು, ತಲೆನೋವು, ಅಸ್ವಸ್ಥತೆ, ದದ್ದುಗಳು, ಜ್ವರ, ವಾಕರಿಕೆ ಮತ್ತು ವಾಂತಿ ಸೇರಿದಂತೆ ಅಡ್ಡಪರಿಣಾಮಗಳು ಉಂಟಾಗುತ್ತವೆ" ಎಂದು ತಿಳಿಸಿದೆ.