ನವದೆಹಲಿ,ಜ.19 (DaijiworldNews/HR): ಅರುಣಾಚಲ ಪ್ರದೇಶದಲ್ಲಿ ಚೀನಾವು ಹಳ್ಳಿಯೊಂದನ್ನು ನಿರ್ಮಿಸಿದ್ದು, ಈ ಕುರಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ನಿಮ್ಮ ಈ ಭರವಸೆಯನ್ನು ನೆನಪಿಡಿ-ಭಾರತವನ್ನು ಯಾವ ದೇಶದ ಎದರು ತಲೆಬಾಗಿ ನಿಲ್ಲಲು ಅವಕಾಶ ನೀಡುವುದಿಲ್ಲ" ಎಂದು ಮೋದಿಯವರ ಹೇಳಿಕೆಯನ್ನು ಟ್ವೀಟ್ ಮಾಡಿರುವ ರಾಹುಲ್, ಚೀನಾ ವಿವಾದಿತ ಭೂಪ್ರದೇಶದಲ್ಲಿ ಹಳ್ಳಿ ನಿರ್ಮಿಸಿದೆ ಎಂಬ ವರದಿಯನ್ನು ಟ್ವೀಟ್ನಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲ ಅವರೂ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, "ಮೋದಿಜಿ ಎಲ್ಲಿದೆ ನಿಮ್ಮ 56 ಇಂಚಿನ ಎದೆ" ಎಂದು ಟ್ವೀಟ್ ಮಾಡಿದ್ದಾರೆ.