ರಾಮದುರ್ಗ, ಜ.19 (DaijiworldNews/PY): ಒಂದೇ ಕುಟುಂಬದ ನಾಲ್ಕು ಮಂದಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮದುರ್ಗ ಪಟ್ಟಣದ ನವೀಪೇಟೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತರನನ್ನು ಗೊಬ್ಬರದ ವರ್ತಕರಾಗಿದ್ದ ಪ್ರವೀಣ ರಮೇಶ ಶೆಟ್ಟರ (37), ಅವರ ಪತ್ನಿ ರಾಜೇಶ್ವರಿ (30), ಮಕ್ಕಳಾದ ಅಮೃತಾ (8) ಮತ್ತು ಅದ್ವಿಕ್ (5) ಎನ್ನಲಾಗಿದೆ.
ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಪತ್ನಿ ಮಕ್ಕಳೊಂದಿಗೆ ಅವರು ಅನ್ಯೋನ್ಯವಾಗಿದ್ದರು ಎಂದು ನೆರೆಹೊರೆಯವರು ಹೇಳಿದ್ದಾರೆ.
ಘಟನೆಯ ಬಗ್ಗೆ ರಾಮದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದ್ದೆ.