ಉಡುಪಿ, ಜ 18 (DaijiworldNews/SM): ಕೃಷ್ಣ ನೂರಿನಲ್ಲಿ ಗೋಹತ್ಯೆ ನಿಷೇಧ ಕಾನೂನಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಕರಂಬಳ್ಳಿಯಲ್ಲಿ ಗೋಪೂಜೆ ನಡೆಸುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯವರ ಕನಸು ನನಸಾಗುತ್ತಿದೆ. ಸ್ವಾತಂತ್ರ್ಯ ವೇಳೆಯೇ ಗೋಹತ್ಯೆ ನಿಷೇಧವಾಗಬೇಕೆಂದು ಅವರು ಬಯಸಿದ್ದರು. ಕರ್ನಾಟಕದಲ್ಲಿ ಇಂದಿನಿಂದ ಗೋಹತ್ಯೆ ನಿಷೇಧ ಜಾರಿಯಾಗುತ್ತಿದೆ. ಇದೊಂದು ಐತಿಹಾಸಿಕ ನಿರ್ಣಯವಾಗಿದೆ ಎಂದರು.
ಇನ್ನು ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಗೋಹತ್ಯೆಗೆ ಅವಕಾಶವಿಲ್ಲ. ರಾಜ್ಯದ ಜನರ ಅಪೇಕ್ಷೆಯಂತೆ ಗೋಹತ್ಯೆ ನಿಷೇಧ ಜಾರಿ ಮಾಡಿದ್ದೇವೆ. ಇಂದಿನಿಂದ ರಾಜ್ಯದಲ್ಲಿ ಎಲ್ಲೂ ಗೋಹತ್ಯೆ ನಡೆಯುವಂತಿಲ್ಲ. ಉಡುಪಿಯಲ್ಲಿ ಗೋವಿಗೆ ಪೂಜೆ ಮಾಡಿ ಚಾಲನೆ ನೀಡಿದ್ದೇವೆ. ಈ ಕಾನೂನಿಗೆ ಜನರು ಸಹಕರಿಸಬೇಕು ಎಂದು ಉಡುಪಿಯಲ್ಲಿ ಸಿಎಂ ಯಡಿಯೂರಪ್ಪ ಅವರು ಹೇಳಿದ್ದಾರೆ.