ಮಂಗಳೂರು, ಜ.18 (DaijiworldNews/HR): "ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಅಧಿಕಾರಕ್ಕೆ ಬಂದ ಬಳಿಕ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ" ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ಈಗಾ ತಿಥಿ ಪಾರ್ಟಿ ಆಗ್ತಾ ಇದೆ ಎಂದು ಹೇಳಿದ್ದ ಕಟೀಲ್ಗೆ ತಿರುಗೇಟು ನೀಡಿದ ಹರೀಶ್, "ನಳಿನ್ ಅಧಿಕಾರಕ್ಕೆ ಬಂದ ಬಳಿಕ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ, ಅವರಿಗೆ ಸಂಪ್ರದಾಯ ಇದೆಯೋ ಇಲ್ಲವೋ ಗೊತ್ತಲ್ಲ ಆದರೆ ನಮಗೆ ಸಂಪ್ರದಾಯ ಇದೆ" ಎಂದರು.
ಇನ್ನು "ಸಂಸದ ನಳಿನ್ ಕುಮಾರ್ ಕಟೀಲ್ಗೆ ಅಧಿಕಾರದ ಮದ ಏರಿದೆ, ಅವರಿಗೆ ನಾಲಿಗೆಯಲ್ಲಿ ಹಿಡಿತ ಇರಲಿ ಅತಿಯಾದರೆ ಜನರು ಹಾಸ್ಯಗಾರ ಎನ್ನುತ್ತಾರೆ" ಎಂದು ಹೇಳಿದ್ದಾರೆ.