ಬೆಂಗಳೂರು,ಜ.18 (DaijiworldNews/HR): "ಮಹಾರಾಷ್ಟ್ರದ ಸಾಂಗ್ಲಿ ಮತ್ತು ಸೊಲ್ಲಾಪುರದಲ್ಲಿ ಕನ್ನಡಿಗರುಹೆಚ್ಚಾಗಿದ್ದು, ಅದನ್ನು ಕರ್ನಾಟಕಕ್ಕೆ ಸೇರಿಸುತ್ತೇವೆ. ಮಹಾಜನ್ ವರದಿಯಲ್ಲೂ ಈ ಬಗ್ಗೆ ಹಕ್ಕು ಮಂಡಿಸಿದ್ದೇವೆ" ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ವಿಕಾಸಸೌಧದಲ್ಲಿ ಮಾತನಾಡಿದ ಅವರು, "ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇಲ್ಲಸಲ್ಲದ ಅನಾವಶ್ಯಕ ಹೇಳಿಕೆ ಕೊಟ್ಟಿದ್ದು, ಮಹಾಜನ್ ವರದಿ ಅಂತಿಮವಾಗಿದ್ದು, ಇದಕ್ಕೆ ಪಾರ್ಲಿಮೆಂಟ್ ಕೂಡ ಒಪ್ಪಿಕೊಂಡಿದೆ" ಎಂದರು.
ಇನ್ನು "ಶಾಂತವಾಗಿರುವ ಬೆಳಗಾವಿಯ ಪರಿಸ್ಥಿತಿ ಕದಡಲು ಠಾಕ್ರೆ ಪ್ರಯತ್ನ ನಡೆಸುತ್ತಿದ್ದು, ಸಂವಿಧಾನ ವಿರುದ್ಧವಾಗಿ ಅವರು ಮಾತನಾಡುತ್ತಿದ್ದಾರೆ. ಒಬ್ಬ ಮುಖ್ಯಮಂತ್ರಿಯಾಗಿ ಜವಾಬ್ದಾರಿ ಮರೆತು ಇಂತಹ ಹೇಳಿಕೆ ಕೊಟ್ಟಿದ್ದಾರೆ" ಎಂದು ಹೇಳಿದ್ದಾರೆ.