ಮಂಗಳೂರು, ಜ.18 (DaijiworldNews/HR): ಕೇರಳ ಮೂಲದ ಯುವಕನಿಗೆ ಮಂಗಳೂರಿನ ಯುವತಿಯರಿಂದ ಹನಿಟ್ರ್ಯಾಪ್ ನಡೆದಿದ್ದು, ಈ ಸಂಬಂಧ ನಾಲ್ವರು ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ರೇಷ್ಮಾ,ಮಹಮ್ಮದ್ ಇಕ್ಬಾಲ್, ಜೀನತ್ ಮತ್ತು ಅಬ್ದುಲ್ ಖಾದರ್ ನಾಜೀಪ್ ಎಂದು ಗುರುತಿಸಲಾಗಿದೆ.
ಫೇಸ್ಬುಕ್ ಮುಖಾಂತರ ಕೇರಳದ ಯುವಕನ ಜೊತೆ ಸಂಪರ್ಕ ಮಾಡಿಕೊಂಡ ಯುವತಿಯರು ಬಳಿಕ ಜ.16ರಂದು ಸುರತ್ಕಲ್ ಸಮೀಪದ ಕೃಷ್ಣಾಪುರದ ಮನೆಗೆ ಕರೆದುಕೊಂಡು ಹೋಗಿ ಬ್ಲಾಕ್ ಮೇಲ್ ಮಾಡಿ ಐದು ಲಕ್ಷ ಹಣಕ್ಕಾಗಿ ಬೇಡಿಕೆಯಿಟ್ಟು ಇಕ್ಬಾಲ್ ಮತ್ತು ನಾಜೀಪ್ ಸೇರಿ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಇನ್ನು ಈ ಪ್ರಕರಣಕ್ಕೂ ಮುನ್ನ ಆರು ಮಂದಿಗೆ ಹನಿಟ್ರ್ಯಾಪ್ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ರೇಶ್ಮಾ ಬೀಡಿ ಕಟ್ಟುವ ವೃತ್ತಿ ಮಾಡುತ್ತಿದ್ದು, ಜೀನತ್ ಇನ್ಸೂರೆನ್ಸ್ ಹಾಗೂ ಇಕ್ಬಾಲ್ ಮತ್ತು ನಾಜೀಪ್ ಚಾಲಕ ವೃತ್ತಿ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.