ಲಖನೌ,ಜ.18 (DaijiworldNews/HR): ಜನವರಿ 26ರಿಂದ ಅಯೋಧ್ಯೆಯ ಧನ್ನಿಪುರ ಗ್ರಾಮದಲ್ಲಿ ಮಸೀದಿ ನಿರ್ಮಾಣ ಯೋಜನೆಯು ಅಧಿಕೃತವಾಗಿ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.
"ಧನ್ನಿಪುರ ಮಸೀದಿ ಯೋಜನೆಗೆ ಗಣರಾಜ್ಯೋತ್ಸವ ದಿನದಂದು ಚಾಲನೆ ನೀಡಲು ಇಂಡೋ-ಇಸ್ಲಾಮಿಕ್ ಸಾಂಸ್ಕೃತಿ ಪ್ರತಿಷ್ಠಾನದ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಆ ದಿನ ಬೆಳಿಗ್ಗೆ 8.30ಕ್ಕೆ ರಾಷ್ಟ್ರಧ್ವಜ ಹಾರಿಸಿ ಬಳಿಕ ಮುಖ್ಯ ಟ್ರಸ್ಟಿ ಮತ್ತು ಸದಸ್ಯರು ವೈವಿಧ್ಯಮಯ ಸಸಿಗಳನ್ನು ನೆಡಲಿದ್ದಾರೆಂದು" ಪ್ರತಿಷ್ಠಾನದ ಕಾರ್ಯದರ್ಶಿ ಅಥರ್ ಹುಸೇನ್ ತಿಳಿಸಿದ್ದಾರೆ.
"ಮಸೀದಿ ನಿರ್ಮಾಣ ಕಾರ್ಯ 15 ಸಾವಿರ ಚದರ ಅಡಿ ಪ್ರದೇಶದಲ್ಲಿ ನಡೆಯಲಿದ್ದು, ಬಾಬ್ರಿ ಮಸೀದಿಯಷ್ಟೇ ದೊಡ್ಡದಾದ ಮಸೀದಿಯನ್ನು ಇಲ್ಲಿ ಕೂಡ ನಿರ್ಮಿಸಲಿದ್ದು, ಉಳಿದ ಮಸೀದಿಗಳಿಗಿಂತ ಈ ಮಸೀದಿಯ ಆಕಾರ ವಿಭಿನ್ನವಾಗಿರಲಿದೆ" ಎಂದು ಹುಸೇನ್ ತಿಳಿಸಿದ್ದಾರೆ,
ಇನ್ನು ಮಸೀದಿಯೊಂದಿಗೆ ಆಸ್ಪತ್ರೆ, ವಸ್ತು ಸಂಗ್ರಹಾಲಯ, ಗ್ರಂಥಾಲಯ, ಸಮುದಾಯ ಅಡುಗೆ ಮನೆ, ಇಂಡೋ ಇಸ್ಲಾಮಿಕ್ ಸಾಂಸ್ಕೃತಿಕ ಕೇಂದ್ರ, ಪ್ರಕಾಶನ ವಿಭಾಗವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎನ್ನಲಾಗಿದೆ.