ನವದೆಹಲಿ, ಜ 17 (DaijiworldNews/SM): ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಬ್ರಿಟನ್ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಗೆ ಆಹ್ವಾನಿಸಲಾಗಿದೆ. ನೈಋತ್ಯ ಇಂಗ್ಲೆಂಡ್ನ ಸಣ್ಣ ಕಡಲತೀರದ ರೆಸಾರ್ಟ್ ಕಾರ್ನ್ವಾಲ್ನಲ್ಲಿ ಜಿ7ರ 47ನೇ ಶೃಂಗಸಭೆ ನಡೆಯಲಿದೆ.
ಜೂನ್ 11ರಿಂದ 13ರವರೆಗೆ ನಡೆಯಲಿರುವಂತಹ ಜಿ7ರ 47ನೇ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. 2021ರಲ್ಲಿ ಜಿ7 ಅಧ್ಯಕ್ಷತೆ ಮತ್ತು ವಿಶ್ವಸಂಸ್ಥೆಯ ಸಮ್ಮೇಳನದ ಅಧ್ಯಕ್ಷತೆಯ ಸ್ಥಾನ ಪಡೆಯಲು ನಾವು ಎದುರು ನೋಡುತ್ತಿದ್ದೇವೆ. ವಿಶ್ವಸಂಸ್ಥೆಯ ಭದ್ರತಾ ಪರಿಷತ್ಗೆ ಭಾರತ ಮರಳಿದ್ದನ್ನು ನಾವು ಸ್ವಾಗತಿಸುತ್ತೇವೆ ಎಂಬುವುದಾಗಿ ಪ್ರಧಾನಿಯವರು ಪ್ರತಿಕ್ರಿಯೆ ನೀಡಿದ್ದಾರೆ.
ಜಿ7 ಶೃಂಗಸಭೆ ಸಭೆಯಲ್ಲಿ ಭಾಗವಹಿಸಲು ಬ್ರಿಟನ್ ಡಿ.15ರಂದು ಅಧಿಕೃತವಾಗಿ ಭಾರತವನ್ನು ಆಹ್ವಾನ ನೀಡಿದೆ.