ಮೈಸೂರು,ಜ.17 (DaijiworldNews/HR): "ಸಿದ್ದರಾಮಯ್ಯನವರು ಮುಖ್ಯಮಂತ್ರಿ ಬದಲಾಗುತ್ತಾರೆಂದು ಪ್ರತಿ ಸಮಯದಲ್ಲೂ ಒಂದೊಂದು ದಿನಾಂಕವನ್ನು ಹೇಳುತ್ತಿದ್ದಾರೆ, ಅದ್ಯಾವಾಗ ಸಿದ್ದರಾಮಯ್ಯನವರು ಜ್ಯೋತಿಷ್ಯರಾಗಿದ್ದಾರೆ ಗೊತ್ತಿಲ್ಲ" ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
"ನನಗೆ ಆರ್ಎಸ್ಎಸ್ ಮೂಲಗಳಿಂದ ಮಾಹಿತಿ ಸಿಕ್ಕಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಏಪ್ರಿಲ್ ನಂತರ ಕೆಳಗಿಳಿಸುತ್ತಾರೆ" ಎಂದು ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದರು.
ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, "ಸಿದ್ದರಾಮಯ್ಯ ಯಾವಾಗ ಜ್ಯೋತಿಷಿ ಆದರೋ ಗೊತ್ತಿಲ್ಲ, ಪ್ರತಿ ಸಮಯದಲ್ಲೂ ಒಂದೊಂದು ದಿನಾಂಕವನ್ನು ಹೇಳಿತ್ತಿದ್ದಾರೆ. ಈಗ ಏಪ್ರಿಲ್ ಎಂದು ಹೇಳುತ್ತಿದ್ದಾರೆ, ಅದು ಎಂದಿಗೂ ಸತ್ಯವಾಗಲ್ಲ, ಅವರ ಭವಿಷ್ಯ ಯಾವಾಗಲೂ ಸುಳ್ಳಾಗುತ್ತದೆ" ಎಂದರು.
ಇನ್ನು" ಶೀಘ್ರವೇ ಹೊಸ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆ ಆದ ಸದಸ್ಯರಿಗೆ ತರಬೇತಿ ನೀಡಲಾಗುವುದು" ಎಂದು ಹೇಳಿದ್ದಾರೆ.