ಬೆಂಗಳೂರು, ಜ. 17 (DaijiworldNews/MB) : ಶಿವಮೊಗ್ಗದ ಭದ್ರಾವತಿಯಲ್ಲಿ ಶನಿವಾರ ಆರ್ಎಎಫ್ ಘಟಕಕ್ಕೆ ಗೃಹಸಚಿವರಾದ ಅಮಿತ್ ಶಾ ಅವರು ಶಂಕುಸ್ಥಾಪನೆ ನೆರವೇರಿಸಿದ್ದು, ಅಡಿಗಲ್ಲು ಫಲಕ ಅನಾವರಣಗೊಳಿಸಿದ್ದಾರೆ. ಅಡಿಗಲ್ಲು ಫಲಕಗಳು ಹಿಂದಿ ಮತ್ತು ಆಂಗ್ಲಭಾಷೆಯಲ್ಲಿವೆ. ಈ ವಿಚಾರವಾಗಿ ರಾಜ್ಯದಲ್ಲಿ ವಿರೋಧ ಪಕ್ಷಗಳು ಆಡಳಿತರೂಢ ಬಿಜೆಪಿಯ ವಿರುದ್ದ ತೀವ್ರ ವಾಗ್ದಾಳಿ ನಡೆಸುತ್ತಲ್ಲಿದ್ದಾರೆ.
ಈ ವಿಚಾರವಾಗಿ ಮೈಸೂರಿನಲ್ಲಿ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಕನ್ನಡವನ್ನು ಕಡೆಗಣಿಸಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ'' ಎಂದು ಹೇಳಿದರು.
''ಕಾರ್ಯಕ್ರಮ ಕನ್ನಡದಲ್ಲೇ ನಡೆದಿರುವಾಗ, ಕನ್ನಡ ಲಿಪಿಯ ಫಲಕವಿರಬೇಕಿತ್ತು. ಕನ್ನಡ ಭಾಷೆ ಬಳಸದೇ ಇರುವುದು ದೊಡ್ಡ ಅಪರಾಧ'' ಎಂದು ಹೇಳಿದ ಅವರು, ''ಅಮಿತ್ ಶಾಗೆ ಕನ್ನಡ ಬರುತ್ತೇನ್ರಿ'' ಎಂದು ಪ್ರಶ್ನಿಸಿದರು. ಹಾಗೆಯೇ, ''ರಾಜ್ಯದಲ್ಲಿ ಹಿಂದಿ ಹೇರಿಕೆ ಅಷ್ಟು ಸುಲಭವಲ್ಲ'' ಎಂದು ಕೂಡಾ ಇದೇ ವೇಳೆ ಹೇಳಿದರು.
ಇನ್ನು ಬಿಎಸ್ ಯಡಿಯೂರಪ್ಪ ಆಡಳಿತವನ್ನು ಶಾ ಅವರು ಹೊಗಳಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ''ಕೇಂದ್ರದಲ್ಲಿ ಅವರು ಒಳ್ಳೆಯಾ ಸರ್ಕಾರವಿದೆಯಾ? ಇಷ್ಟೆಲ್ಲಾ ನಡೆಯುತ್ತಿರುವಾಗ ಅವರು ಯಡಿಯೂರಪ್ಪ ಸರ್ಕಾರದ ಸಮರ್ಥನೆ ನಡೆಸುತ್ತಿದ್ದಾರೆ'' ಎಂದು ಸಿಡಿಮಿಡಿಗೊಂಡರು.