ನವದೆಹಲಿ,ಜ.17 (DaijiworldNews/HR): ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ಗೆ ನವದೆಹಲಿಯಲ್ಲಿ ಸಿದ್ಧತೆಗಳು ನಡೆಯುತ್ತಿದ್ದು, ಕೊರೊನಾ ನಿಯಮಗಳ ಪ್ರಕಾರ ಈ ಬಾರಿ ಪಥ ಸಂಚಲನ ಹಾಗೂ ಸೈನಿಕ ಪಡೆಯಲ್ಲಿ ಕಡಿತವುಂಟಾಗಲಿದೆ.
ಸಾಂಧರ್ಭಿಕ ಚಿತ್ರ
ಈ ಹಿನ್ನಲೆಯಲ್ಲಿ ಈ ಬಾರಿ ಪ್ರೇಕ್ಷಕರಿಗೆ ಗಣರಾಜ್ಯೋತ್ಸವ ಪಥಸಂಚಲನದ ಸಂಪೂರ್ಣ ವೈಭವ ಹಾಗೂ ಮನರಂಜನೆಯನ್ನು ಸವಿಯಲು ಸಾಧ್ಯವಿಲ್ಲ, ಪಥ ಸಂಚಲವು ಕೆಂಪು ಕೋಟೆಯವರೆಗೂ ಸಾಗುವುದಿಲ್ಲ. ಬದಲಾಗಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಕ್ತಾಯವಾಗಲಿದೆ ಎಂದು ತಿಳಿದು ಬಂದಿದೆ.
ಇನ್ನು ಪಥಸಂಚಲನ ಅಂತರವನ್ನು ಶೇಕಡಾ 50ರಷ್ಟು ಕಡಿತಗೊಳಿಸಲಾಗಿದ್ದು, ಯೋಧರು ಮುಖಕ್ಕೆ ಮಾಸ್ಕ್ ಧರಿಸಲಿದ್ದು, ಈ ಬಾರಿ ವಾಡಿಕೆಯಂತೆ 144 ಜವಾನರ ಬದಲಾಗಿ ಒಂದು ದಳದಲ್ಲಿ 96 ಸೈನಿಕರು ಇರುತ್ತಾರೆ.