ಮುಂಬೈ,ಜ.17 (DaijiworldNews/HR): ವೇದಿಕೆಯಲ್ಲಿ ಸರಸ್ವತಿ ಪೂಜೆ ನಡೆಸಿ, ಚಿತ್ರಕ್ಕೆ ಮಾಲಾರ್ಪಣೆ ಮಾಡಿದ್ದನ್ನು ವಿರೋಧಿಸಿದ ಹಿರಿಯ ಮರಾಠಿ ಕವಿ ಯಶವಂತ್ ಮನೋಹರ್ ಅವರು ವಿದರ್ಭ ಸಾಹಿತ್ಯ ಸಂಘ ನೀಡಿದ ಜೀವಮಾನ ಸಾಧನೆ ಪ್ರಶಸ್ತಿಯನ್ನು ತಿರಸ್ಕರಿಸಿದ ಘಟನೆ ನಡೆದಿದೆ.
ಈ ಕುರಿತು ವಿದರ್ಭ ಸಾಹಿತ್ಯ ಸಂಘಕ್ಕೆ ಪತ್ರ ಬರೆದಿರುವ ಮನೋಹರ್, "ದೇವತೆಯ ಚಿತ್ರಕ್ಕೆ ಮಹಿಳೆಯರು ಹಾಗೂ ಶೂದ್ರರನ್ನು ಶಿಕ್ಷಣ ಮತ್ತು ಜ್ಞಾನ ಪಡೆಯದಂತೆ ತಡೆಯುವ ಸಂಕೇತ. ಸಾಹಿತ್ಯ ಕಾರ್ಯಕ್ರಮಗಳಲ್ಲಿ ಧಾರ್ಮಿಕತೆಯನ್ನು ನಾನು ಒಪ್ಪುವುದಿಲ್ಲ" ಎಂದು ತಿಳಿಸಿದ್ದಾರೆ.
ಇನ್ನು "ಬರಹಗಾರನಾಗಿ ನನ್ನ ಪಾತ್ರ ಮತ್ತು ನನ್ನ ಯೋಚನೆಗಳ ಬಗ್ಗೆ ವಿದರ್ಭ ಸಾಹಿತ್ಯ ಸಂಘಕ್ಕೆ ಅರಿವು ಇದೆ ಎಂದು ನಾನು ಭಾವಿಸಿದ್ದೇನೆ, ಸರಸ್ವತಿ ದೇವಿಯ ಚಿತ್ರ ಇರುತ್ತದೆ ಎಂದು ನನಗೆ ಹೇಳಲಾಗಿದೆ. ನನ್ನ ಮೌಲ್ಯಗಳನ್ನು ಕಡೆಗಣಿಸಿ ನಾನು ಪ್ರಶಸ್ತಿ ಸ್ವೀಕರರಿಸುವುದಿಲ್ಲ" ಎಂದು ಹೇಳಿದ್ದಾರೆ.