ನವದೆಹಲಿ, ಜ.17 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿವಿಧ ಭಾಗಗಳಿಂದ ಏಕತಾ ಪ್ರತಿಮೆ ಇರುವ ಗುಜರಾತ್ನ ಕೆವಡಿಯಾಗೆ ಸಂಚರಿಸುವ ಎಂಟು ರೈಲುಗಳಿಗೆ ಭಾನುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.
"ಹಸಿರು ಕಟ್ಟಡ ಪ್ರಮಾಣ ಪಡೆದ ಕೆವಾಡಿಯಾ ರೈಲು ನಿಲ್ದಾಣ ದೇಶದ ಮೊದಲ ರೈಲು ನಿಲ್ದಾಣವಾಗಿದೆ. ಪ್ರತಿಮೆಯನ್ನು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಸ್ಮರಣಾರ್ಥ ನಿರ್ಮಿಸಲಾಗಿದ್ದು, ದೇಶದ ವಿವಿಧ ಭಾಗಗಳಿಂದ ಇದನ್ನು ನೋಡಲು ಬರುವ ಪ್ರವಾಸಿಗರಿಗೆ ಇದೀಗ ರೈಲ್ವೆ ಸಂಪರ್ಕ ದೊರೆಯಲಿದೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
"ಇದರಲ್ಲಿ ಒಂದು ರೈಲು ಜನ ಶತಾಬ್ಧಿ ಎಕ್ಸ್ಪ್ರೆಸ್ ಆಗಿದ್ದು, ಈ ರೈಲು ಅಹಮದಾಬಾದ್ನಿಂದ ಕೆವಾಡಿಯಾಕ್ಕೆ ಸಂಚರಿಸಲಿದೆ. ಈ ರೈಲಿನಲ್ಲಿ ಅತ್ಯಾಧುನಿಕ ವಿಸ್ಟಾಡೋಮ್ ಬೋಗಿಗಳು ಇರಲಿವೆ" ಎಂದು ತಿಳಿಸಿದ್ದಾರೆ.