ನವದೆಹಲಿ, ಜ.17 (DaijiworldNews/PY): "ಪೂರ್ವ ಲಡಾಕ್ನಲ್ಲಿ ಬೆಳವಣಿಗೆಯ ಹಿನ್ನೆಲೆ ಸೇನಾಪಡೆಯನ್ನು ಪುನರ್ರಚಿಸಲು ಹಾಗೂ ಸೇನಾಪಡೆಯ ಸಾಮರ್ಥ್ಯವನ್ನು ಹೆಚ್ಚಿಸಲು ನಾವು ಮುಂದಾಗಿದ್ದೇವೆ" ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಎಂ ಎಂ ನರವಣೆ ತಿಳಿಸಿದ್ದಾರೆ.
ಸೇನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಪೂರ್ವ ಲಡಾಕ್ನ ಹವಾಮಾನಕ್ಕೆ ಹೊಂದಿಕೊಳ್ಳುವಂತೆ ಹಾಗೂ ಭವಿಷ್ಯದ ಅವಶ್ಯಕತೆಗಳಿಗೆ ಅನುಗುಣವಾಗಿ ಸೇನಾಪಡೆಯ ರಚನೆಯನ್ನು ಪುನರ್ರಚಿಸಲಾಗಿದೆ. ಪರ್ವತ ಸ್ಟ್ರೈಕ್ ಕಾರ್ಪ್ಸ್ ಎನ್ನುವ 17 ಕಾರ್ಪ್ಸ್ 3-4 ಆಂತರಿಕ ಯುದ್ದ ಗುಂಪುಗಳನ್ನು ಹೊಂದಿದೆ" ಎಂದಿದ್ದಾರೆ.
"ಈಶಾನ್ಯ ಕಡೆಯಿಂದ ಒಂದು ಬ್ರಿಗೇಡ್ ಅನ್ನು ಹೊರತೆಗೆಯಲಾಗಿದ್ದು, ಒಂದೆರಡು ಬ್ರಿಗೇಡ್ ಅನ್ನು ಸೇನಾಪಡೆಯ ಪ್ರಾಥಮಿಕ ಪಾತ್ರದ ಪ್ರಕಾರ ನಿಯೋಜನೆ ಮಾಡಲು ಹೊರಕ್ಕೆ ತೆಗೆಯಬಹುದಾಗಿದೆ. ಯುದ್ದದ ಸನ್ನಿವೇಶ ಸೇರಿದಂತೆ ಬಾಹ್ಯ ಬೆದರಿಕೆಗಳನ್ನು ಎದುರಿಸಲು ಇದ್ದು ಸಿದ್ದವಾಗಿದೆ" ಎಂದು ಹೇಳಿದ್ದಾರೆ.