ನವದೆಹಲಿ, ಜ.17 (DaijiworldNews/PY): ಕೊರೊನಾ ಲಸಿಕೆ ವಿತರಣೆ ಅಭಿಯಾನವನ್ನು ಯಶಸ್ವಿಯಾಗಿ ಪ್ರಾರಂಭ ಮಾಡಿದ ಹಿನ್ನೆಲೆ ಭಾರತಕ್ಕೆ ಶುಭಕೋರಿದ ಶ್ರೀಲಂಕಾ ಪ್ರಧಾನಿಮಂತ್ರಿ ಮಹೀಂದ್ರ ರಾಜಪಕ್ಸೆ ಅವರಿಗೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಧನ್ಯವಾದ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, "ಧನ್ಯವಾದಗಳು ರಾಕಪಕ್ಸೆ. ಕೊರೊನಾ ವಿರುದ್ದದ ಹೋರಾಟದಲ್ಲಿ ನಮ್ಮ ವಿಜ್ಞಾನಿಗಳು ಹಾಗೂ ಮುಂಚೂಣಿ ಕಾರ್ಯಕರ್ತರು ದಣಿವರಿಯದ ಪ್ರಯತ್ನಗಳು ಹಾಗೂ ನಿರ್ಣಾಯಕ ಪತ್ರ ವಹಿಸಿದ್ದಾರೆ. ಲಸಿಕೆಯ ತ್ವರಿತ ಅಭಿವೃದ್ದಿ ಹಾಗೂ ಬಿಡುಗಡೆಯು ಆರೋಗ್ಯಕರ ಹಾಗೂ ರೋಗ ಮುಕ್ತ ಜಗತ್ತಿಗೆ ನಮ್ಮ ಜಂಟಿ ಹೋರಾಟದ ಪ್ರಯತ್ನದಲ್ಲಿ ಒಂದು ಪ್ರಮುಖ ಹೆಗ್ಗುರುತಾಗಿದೆ" ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ಅತೀ ದೊಡ್ಡ ಲಸಿಕೆ ನೀಡುವ ಅಭಿಯಾನಕ್ಕೆ ಆನ್ಲೈನ್ ಮೂಲಕ ಜ.16ರ ಶನಿವಾರದಂದು ಚಾಲನೆ ನೀಡಿದ್ದರು.