ರಾಜಸ್ಥಾನ, ಜ.17 (DaijiworldNews/PY): ಖಾಸಗಿ ಬಸ್ವೊಂದಕ್ಕೆ ವಿದ್ಯುತ್ ತಂತಿ ಸ್ಪರ್ಷವಾಗಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಆರು ಮಂದಿ ಪ್ರಯಾಣಿಕರು ಮೃತಪಟ್ಟು 19 ಮಂದಿ ಗಾಯಗೊಂದ ಘಟನೆ ಶನಿವಾರ ತಡರಾತ್ರಿ ರಾಜಸ್ಥಾನದ ಜಲೋರ್ನಲ್ಲಿ ನಡೆದಿದೆ.
ಈ ಬಸ್ ಮಂದೋರ್ನಿಂದ ಬೀವರ್ಗೆ ಚಲಿಸುತ್ತಿತ್ತು. ಆದರೆ, ಬಸ್ನ ಚಾಲಕ ತಪ್ಪಾಗಿ ಮಹೇಶ್ಪುರ ಗ್ರಾಮದ ಕಡೆಗೆ ಬಸ್ ಚಲಾಯಿಸಿದ್ದ. ಈ ಸಂದರ್ಭ ಬಸ್ಗೆ ವಿದ್ಯುತ್ ತಂತಿ ಸ್ಪರ್ಷವಾಗಿದ್ದು, ಬೆಂಕಿ ಕಾಣಿಸಿಕೊಂಡಿದೆ.
ಘಟನೆಯಲ್ಲಿ ಆರು ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದು, 19 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜೋಧಪುರ ಹಾಗೂ ಜಲ್ಲೋರ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ, "ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜೋಧಪುರಕ್ಕೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಉಳಿದ 13 ಗಾಯಾಳುಗಳಿಗೆ ಜಲ್ಲೋರ್ನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ" ಎಂದಿದ್ದಾರೆ.