ಕೊಲ್ಕತ್ತಾ,ಜ.16 (DaijiworldNews/HR): "ಕೊರೊನಾಗಿಂತಲೂ ಬಿಜೆಪಿ ಅಪಾಯಕಾರಿಯಾಗಿದೆ" ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಹೇಳಿಕೆ ನೀಡಿದ್ದು, ಈ ಹೇಳಿಕೆ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಬಿಜೆಪಿ ಐಟಿ ಘಟಕದ ಅಧ್ಯಕ್ಷ ಅಮಿತ್ ಮಾಳವೀಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ "ಪಶ್ಚಿಮ ಬಂಗಾಳದಲ್ಲಿ ಅತ್ಯಂತ ಕೆಟ್ಟ ರೀತಿಯ ವ್ಯಾಕ್ಸಿನ್ ರಾಜಕೀಯ ಅನಾವರಣಗೊಳ್ಳುತ್ತಿದೆ" ಎಂದಿದ್ದಾರೆ.
ಇನ್ನು "ನಿಮ್ಮ ಕಿವಿಗಳು ಹಾಗೂ ಕಣ್ಣುಗಳನ್ನು ತೆರೆದಿಡಿ, ಏಕೆಂದರೆ ಕೊರೊನಾಕ್ಕಿಂತಲೂ ಹೆಚ್ಚು ಅಪಾಯಕಾರಿ ಏನು ಗೊತ್ತೇ? ಅದು ಬಿಜೆಪಿ" ಎಂದು ಸಾರ್ವಜನಿಕ ಸಭೆಯೊಂದನ್ನುದ್ದೇಶಿಸಿ ಮಾತನಾಡುತ್ತಾ ನುಸ್ರತ್ ಹೇಳಿದ್ದರು.