ಮೈಸೂರು, ಜ.16 (DaijiworldNews/PY): "ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರಲು ಸಿ.ಪಿ.ಯೋಗೇಶ್ವರ್ ಅವರೂ ಕೂಡಾ ಓರ್ವರು" ಎಂದು ವಿ ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, "ಸಿ.ಪಿ.ಯೋಗೇಶ್ವರ್ ಅವರೂ ಕೂಡಾ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರಲು ಕಾರಣೀಕರ್ತರು. ಹಾಗಾಗಿ ಅವರಿಗೆ ಸಚಿವ ಸ್ಥಾನ ನೀಡಿದ್ದು ಸರಿಯಾಗಿದೆ" ಎಂದಿದ್ದಾರೆ.
"ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಹೆಚ್.ವಿಶ್ವನಾಥ್ ಅವರಿಗೆ ಅಸಮಾಧಾನವಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಹೆಚ್. ವಿಶ್ವನಾಥ್ ಅವರ ರೀತಿಯಲ್ಲಿ ಸಿ.ಪಿ.ಯೋಗೇಶ್ವರ್ ಅವರೂ ಕೂಡಾ ಕಾರಣೀಕರ್ತರಾಗಿದ್ದಾರೆ" ಎಂದು ಹೇಳಿದ್ದಾರೆ.
"ಯೋಗೇಶ್ವರ್ಗೆ ಏಕೆ ಸಚಿವ ಸ್ಥಾನ ನೀಡಿದ್ದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಪ್ರಶ್ನೆ ಮಾಡುವುದು ಸೂಕ್ತವಲ್ಲ. ಯಾರಿಗೆ ಸಚಿವ ಸ್ಥಾನ ನೀಡಬೇಕು, ನೀಡಬಾರದು ಎನ್ನುವ ವಿಚಾರ ಬಿಎಸ್ವೈ ಅವರಿಗೆ ಬಿಟ್ಟಿದ್ದು. ವಿಶ್ವನಾಥ್ ಅವರು ಸದ್ಯ ಕೋಪದಲ್ಲಿದ್ದು, ನಂತರ ನಾನು ಅವರನ್ನು ಕರೆಸಿ ಮಾತನಾಡುತ್ತೇನೆ" ಎಂದಿದ್ದಾರೆ.
"ನಿಗಮ ಮಂಡಳಿ ನೇಮಕಾತಿ ಬಗ್ಗೆ ಈಗಲೂ ಕೂಡಾ ಅಸಮಾಧಾನವಿದೆ. ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ ಕಲ್ಪಿಸಿಲ್ಲ" ಎಂದು ತಿಳಿಸಿದ್ದಾರೆ.