ನವಹೆದಲಿ, ಜ.16 (DaijiworldNews/HR): ವಾಟ್ಸ್ಆ್ಯಪ್ನ ಹೊಸ 'ಪ್ರೈವೆಸಿ ಅಪ್ಡೇಟ್ ಕುರಿತು ಬಳಕೆದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದರ ಬೆನ್ನಲ್ಲೇ ಬಳಕೆದಾರರ ಭದ್ರತೆ ಮತ್ತು ಖಾಸಗಿತನಕ್ಕೆ ಸಂಬಂಧಿಸಿದ ಅಪ್ಡೇಟ್ ಅನ್ನು ಮುಂದೂಡಲು ವಾಟ್ಸ್ಆ್ಯಪ್ ನಿರ್ಧಾರ ಮಾಡಿದೆ ಎಂದು ತಿಳಿದು ಬಂದಿದೆ.
ವಾಟ್ಸ್ಆ್ಯಪ್ ಹೊಸ ನೀತಿ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಫೇಸ್ಬುಕ್ ಹೇಳಿಕೆ ಬಿಡುಗಡೆ ಮಾಡಿದ್ದು, "ಹೊಸ ಅಪ್ಡೇಟ್ನಿಂದಾಗಿ ಖಾಸಗಿ ಮಾಹಿತಿಯ ಶೇರಿಂಗ್ ಕುರಿತಾಗಿ ಯಾವುದೇ ಬದಲಾವಣೆ ಮಾಡಿಲ್ಲ" ಎಂದು ಸ್ಪಷ್ಟನೆ ನೀಡಿತ್ತು.
ಇನ್ನು ಫೆಬ್ರವರಿಯಿಂದ ಹೊಸ ಅಪ್ಡೇಟ್ ಬಗ್ಗೆ ಘೋಷಿಸಿದ್ದ ವಾಟ್ಸ್ಆ್ಯಪ್ ಇದೀಗ ಮೇ ತಿಂಗಳವರೆಗೆ ಅಪ್ಡೇಟ್ ಪ್ರಕ್ರಿಯೆಯನ್ನು ಮುಂದೂಡುವುದಾಗಿ ಶುಕ್ರವಾರ ತಿಳಿಸಿದೆ.
"ಪ್ರತಿಯೊಬ್ಬರೂ ವಾಟ್ಸ್ಆ್ಯಪ್ನಲ್ಲಿ ವ್ಯವಹಾರವನ್ನು ಹೊಂದಿಲ್ಲ. ಆದರೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಜನರು ವಾಟ್ಸ್ಆ್ಯಪ್ ಮೂಲಕ ವ್ಯವಹರಿಸಲು ಮುಂದಾಗಲಿದ್ದಾರೆ ಎಂಬುದಾಗಿ ನಾವು ಭಾವಿಸುತ್ತೇವೆ" ಎಂದು ವಾಟ್ಸ್ಆ್ಯಪ್ ಅಭಿಪ್ರಾಯ ವ್ಯಕ್ತಪಡಿಸಿದೆ.