ನವದೆಹಲಿ, ಜ.16 (DaijiworldNews/PY): ಶನಿವಾರ ಬೆಳಗ್ಗೆ ದೆಹಲಿಯಲ್ಲಿ ಭಾರೀ ಮಂಜು ಕವಿದ ವಾತಾವರಣದ ಕಾರಣದಿಂದ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಕಂಡುಬಂದಿದೆ.
ಸಾಂದರ್ಭಿಕ ಚಿತ್ರ
ರನ್ವೇ ಕಾಣಿಸದಷ್ಟು ದಟ್ಟವಾಗಿ ಮಂಜು ಕವಿದಿದ್ದು, ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ಹಾಗೂ ಅಲ್ಲಿಂದ ಹೊರಡಬೇಕಿದ್ದ ನಾಲ್ಕು ವಿಮಾನಗಳ ಸಂಚಾರಕ್ಕೆ ಅಡ್ಡಿಯಾಗಿದೆ.
ಭಾರೀ ಮಂಜಿನ ಹಿನ್ನೆಲೆ ಕೆಲವು ವಿಮಾನಗಳ ಹಾರಾಟ ವಿಳಂಬವಾಗಿದ್ದರೆ, ಇನ್ನು ಒಂದು ವಿಮಾನದ ಹಾರಾಟವನ್ನು ರದ್ದು ಮಾಡಲಾಗಿದೆ. ಮಂಜು ಆವರಿಸಿದ ಕಾರಣ ದೆಹಲಿ ಕೆಲ ಪ್ರದೇಶಗಳಲ್ಲಿ ವಾಹನ ಸವಾರರಿಗೆ ತೊಂದರೆಯಾಗಿದೆ.