ನ್ಯಾಮತಿ (ದಾವಣಗೆರೆ ಜಿಲ್ಲೆ), ಜ.16 (DaijiworldNews/HR): ಮುಸ್ಲಿಂ ಸಮುದಾಯದ ಹಿರಿಯ ಮಹಮದ್ ಶಬೀರ್ ಮತ್ತು ಅವರ ಪುತ್ರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮುಸ್ತಾಫೀಜ್ ಉಲ್ಲಾ ಎಂಬವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸುತ್ತಿರುವ ಆರ್ಎಸ್ಎಸ್ ಸ್ವಯಂಸೇವಕರಿಗೆ ದೇಣಿಗೆ ಸಮರ್ಪಿಸಿದ್ದಾರೆ.
ಈ ಸಂಧರ್ಭದಲ್ಲಿ ಮಾತನಾಡಿದ ಮಹಮದ್ ಶಬೀರ್ "ಭಾರತ ಸರ್ವ ಧರ್ಮಗಳ ತೊಟ್ಟಿಲಾಗಿದ್ದು, ಇಲ್ಲಿ ಎಲ್ಲರೂ ಸಹೋದರರಂತೆ ಬದುಕು ಕಟ್ಟಿಕೊಂಡು ಜೀವನ ನಡೆಸೋಣ" ಎಂದರು.
ಇನ್ನು "ಶ್ರೀರಾಮ ಭಾವೈಕ್ಯದ ಸಂಕೇತವಾಗಿದ್ದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಎಲ್ಲ ಧರ್ಮದವರೂ ದೇಣಿಗೆ ನೀಡುತ್ತಿದ್ದಾರೆ" ಎಂದು ನ್ಯಾಮತಿ ತಾಲ್ಲೂಕು ಅಭಿಯಾನ ಪ್ರಮುಖ್ ವಾದಿರಾಜ್ ಕಮರೂರ್ ಹೇಳಿದ್ದಾರೆ.