ಮಂಜೇಶ್ವರ: ಜ. 16 (DaijiworldNews/MB) : ಮಂಜೇಶ್ವರ ಹೊಸಂಗಡಿ ಪೇಟೆಯಲ್ಲಿ ಕೆಲ ಸಮಯಗಳಿಂದ ಕಳವು ಹೆಚ್ಚುತ್ತಿದ್ದು, ವರ್ತಕರು, ನಾಗರಿಕರು ಭಯದಲ್ಲಿದ್ದಾರೆ.
ಕಳೆದ 15 ದಿನಗಳಿಂದ 10 ಕ್ಕೂ ಅಧಿಕ ಅಂಗಡಿಗಳಿಗೆ ನುಗ್ಗಿ ಕಳವು ನಡೆಸಲಾಗಿದೆ.
ನಗದು ಮತ್ತು ಬೆಲೆಬಾಳುವ ಸಾಮಾಗ್ರಿಗಳನ್ನು ಕದ್ದೊಯ್ಯುತ್ತಿದ್ದು, ಕಳ್ಳತನ ತಡೆಗೆ ಪೊಲೀಸರು ಕ್ರಮ ತೆಗೆದುಕೊಳ್ಳುವಂತೆ ವರ್ತಕರು ಒತ್ತಾಯಿಸಿದ್ದಾರೆ.
ಗುರುವಾರ ರಾತ್ರಿ ಹೊಸಂಗಡಿ ಪೇಟೆಯಲ್ಲಿ ನಾಲ್ಕು ಅಂಗಡಿಗಳಿಗೆ ನುಗ್ಗಿ ಕಳವು ನಡೆಸಲಾಗಿದೆ. ನಿರಂತರ ಕಳವು ನಡೆಯುತ್ತಿರುವುದು ವರ್ತಕರು ಹಾಗೂ ನಾಗರಿಕರ ನಿದ್ದೆಗೆಡಿಸಿದೆ.