ನವದೆಹಲಿ, ಜ. 15 (DaijiworldNews/MB) : ದೇಶದ ಮೊದಲ ಪ್ರಜೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ 5,00,100 ದೇಣಿಗೆ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ವಿಎಚ್ಪಿ ಮುಖಂಡ ಅಲೋಕ್ ಕುಮಾರ್, ''ದೇಶದ ಮೊದಲ ಪ್ರಜೆಯಾದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದಲೇ ನಾವು ದೇಣಿಗೆ ಪ್ರಾರಂಭ ಮಾಡಲೆಂದು ಅವರ ಕುಟುಂಬವನ್ನು ಭೇಟಿಯಾದೆವು. ಅವರು 5,00,100 ದೇಣಿಗೆ ನೀಡಿ ಶುಭಾಶಯ ತಿಳಿಸಿದ್ದಾರೆ'' ಎಂದು ಹೇಳಿದರು.
''ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ಆರಂಭಿಕ ವೆಚ್ಚ 13 ಕೋಟಿ ರೂ. ಅಂದಾಜು ಮಾಡಲಾಗಿದೆ. ಈ ನಿಟ್ಟಿನಲ್ಲಿ ದೇಣಿಗೆ ಸಂಗ್ರಹ ಮಾಡಲು 5,25,000 ಹಳ್ಳಿಗಳಲ್ಲಿ 65,000 ಕುಟುಂಬಗಳನ್ನು ಭೇಟಿಯಾಗಬೇಕಿದೆ'' ಎಂದು ಅಲೋಕ್ ಕುಮಾರ್ ತಿಳಿಸಿದರು.
ಇನ್ನು ವಿಶ್ವ ಹಿಂದೂ ಪರಿಷತ್ನ ಹಿರಿಯ ಸದಸ್ಯರೊಬ್ಬರು, ''ಎಲ್ಲ ಜಾತಿ, ಧರ್ಮ ಸೇರಿದಂತೆ ಸಮುದಾಯಗಳಿಂದ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ಧನ ಸಹಾಯ ಸಂಗ್ರಹ ಮಾಡಲಾಗುವುದು'' ಎಂದು ತಿಳಿಸಿದರು.
ಈ ನಡುವೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಹ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಒಂದು ಲಕ್ಷ ರೂ.ಗಳ ದೇಣಿಗೆ ನೀಡಿದ್ದಾರೆ.