ಬೆಳಗಾವಿ,ಜ.15 (DaijiworldNews/HR): "ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಯಾವ ಸಿ.ಡಿ.ನೂ ಇಲ್ಲ, ಗೀಡಿನೂ ಇಲ್ಲ" ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಈ ಕುರಿತು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಚಿವ ಸಂಪುಟ ವಿಸ್ತರಣೆಯಾದಾಗ ಎಲ್ಲ ಪಕ್ಷದಲ್ಲೂ ಭಿನ್ನಮತ ಅಥವಾ ಅಸಮಾಧಾನ ಬರುವುದು ಸಹಜ, ಯಾರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲವೋ ಅವರಿಗೆ ಬೇಸರ ಆಗಿರುತ್ತದೆ. ಹೀಗಾಗಿ ಅಸಮಾಧಾನ ಹೊರಹಾಕುತ್ತಾರೆ. ಅದೆಲ್ಲವೂ ಮುಂದಿನ ದಿನಗಳಲ್ಲಿ ಸರಿ ಹೋಗಲಿದೆ" ಎಂದರು.
ಇನ್ನು "ಪಕ್ಷದಲ್ಲಿ ನೋವು ತೋಡಿಕೊಳ್ಳಲು ಮುಕ್ತ ಅವಕಾಶವಿದ್ದು, ನಮ್ಮ ನಾಯಕರೊಂದಿಗೆ ನೋವು ಹೇಳಿಕೊಳ್ಳದೆ ಇನ್ಯಾರಿಗೆ ಹೇಳಬೇಕು. ಬೇಸರಗೊಂಡ ಶಾಸಕರು ನನ್ನ ಸಂಪರ್ಕಕ್ಕೆ ಬಂದಿಲ್ಲ. ಕಾದು ನೋಡೋಣ" ಎಂದು ಹೇಳಿದ್ದಾರೆ.