ಬೆಂಗಳೂರು, ಜ.15 (DaijiworldNews/PY): "ಕಡಿಮೆ ಬಡ್ಡಿ ದರದಲ್ಲಿ ಕೇಂದ್ರೀಯ ರಸ್ತೆ ನಿಧಿ ಕಾಮಗಾರಿಗಳಿಗಾಗಿ ಸಾಲ ಪಡೆದುಕೊಂಡು, ವಿನಿಯೋಗ ಮಾಡಲಾಗುವುದು" ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಶುಕ್ರವಾರ ನಡೆದ ಹುಬ್ಬಳ್ಳಿ ಹಾಗೂ ಕಲಘಟಗಿ ರಾಷ್ಷ್ರೀಯ ಹೆದ್ದಾರಿ ಕಾಮಗಾರಿಗಳ ಭೂಮಿ ಪೂಜೆ ಸಮಾರಂಭದಲ್ಲಿ ವರ್ಚ್ಯುವಲ್ ಮೂಲಕ ಭಾಗವಹಿಸಿ ಮಾತನಾಡಿದ ಅವರು, "ಕೇಂದ್ರೀಯ ರಸ್ತೆ ನಿಧಿ ಕಾಮಗಾರಿಗಳಿಗಾಗಿ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆದುಕೊಂಡು ವಿನಿಯೋಗ ಮಾಡಲಾಗುವುದು" ಎಂದು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮಾಹಿತಿ ನೀಡಿದರು.
"ರಾಜ್ಯ ಸರ್ಕಾರವು ಹೆದ್ದಾರಿ ವಿಸ್ತರಣೆಗೆ ಸಂಪೂರ್ಣವಾದ ಸಹಕಾರ ನೀಡಲಿದೆ. ಅಲ್ಲದೇ, ಪರಿಸರ ಸಂಬಂಧಿತ ಅನುಮತಿಗಳನ್ನೂ ಕೂಡಾ ತ್ವರಿತವಾಗಿ ನೀಡಲಾಗುವುದು" ಎಂದು ಹೇಳಿದರು.
ಈ ವೇಳೆ ಕೇಂದ್ರ ಸಚಿವರಿಗೆ ಮನವಿ ಮಾಡಿದ ಸಿಎಂ, ನಾಲ್ಕನೇ ಹಂತದ ರಾಷ್ಟ್ರೀಯ ಹೆದ್ದಾರಿ ವಿಸ್ತರಣಾ ಕಾಮಗಾರಿಗಳ ಭೂಸ್ವಾಧೀನ ಪ್ರಕ್ರಿಯೆಗಳಿಗೆ ಅವಶ್ಯಕವಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿದರು.