ಗುರುದಾಸ್ಪುರ,ಜ.15 (DaijiworldNews/HR): ಪಾಕಿಸ್ತಾನದ ಓರ್ವ ನುಸುಳುಕೋರನನ್ನು ಗಡಿ ಭದ್ರತಾ ಪಡೆಗಳು (ಬಿಎಸ್ಎಫ್) ಹತ್ಯೆಗೈದ ಘಟನೆ ಪಂಜಾಬ್ ರಾಜ್ಯದ ಗುರುದಾಸ್ಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಪಂಜಾಬ್ನ ಗಡಿಯಲ್ಲಿ ಗುರುವಾರ ರಾತ್ರಿ ಅನುಮಾನಾಸ್ಪದ ಓಡಾಟಗಳು ಕಂಡು ಬಂದಿದ್ದು, ಭದ್ರತಾ ಪಡೆಗಳು ಕಾರ್ಯಚರನೆ ನಡೆಸಿವೆ.
ಕಾರ್ಯಾಚರಣೆಯ ವೇಳೆ ಗಡಿ ನುಸುಳಲು ಯತ್ನಿಸುತ್ತಿದ್ದ ಓರ್ವ ಪಾಕ್ ನುಸುಳುಕೋರನ ಮೇಲೆ ಭದ್ರತಾ ಪಡೆಗಳು ಗುಂಡು ಹಾರಿಸಿ ಹತ್ಯೆ ಮಾಡಿದೆ ಎಂದು ತಿಳಿದು ಬಂದಿದೆ.