ಹೊಸದಿಲ್ಲಿ,ಜ.15 (DaijiworldNews/HR): ಪಾಕಿಸ್ಥಾನದ ವಿರುದ್ಧ 1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಜಯಗಳಿಸಿ ಈ ವರ್ಷಕ್ಕೆ 50 ವರ್ಷಗಳಾಗಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆ 2021 ಅನ್ನು ಸುವರ್ಣ ವಿಜಯ ವರ್ಷವಾಗಿ ಆಚರಿಸಲಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ, "ಪಾಕಿಸ್ಥಾನದ ವಿರುದ್ಧದ ಗೆಲುವಿನ 50ನೇ ವರ್ಷಾಚರಣೆಯನ್ನು ದೇಶಾದ್ಯಂತ ಹಲವಾರು ಕಾರ್ಯಕ್ರಮಗಳ ಮೂಲಕ ಆಚರಿಸಲಾಗುವುದು" ಎಂದರು
ಇನ್ನು "ಈ ಇಡೀ ವರ್ಷವನ್ನು ಸುವರ್ಣ ವಿಜಯ ವರ್ಷವಾಗಿ ಆಚರಿಸಲಾಗುವುದು ಎಂದು ಹೇಳಲು ನಾನು ಇಷ್ಟಪಡುತ್ತೇನೆ, 1971ರ ಯುದ್ಧದಲ್ಲಿ ಶೌರ್ಯ ಪ್ರಶಸ್ತಿ ಪಡೆದ ಯೋಧರ ಗ್ರಾಮಗಳಿಂದ ಮಣ್ಣನ್ನು ಸಂಗ್ರಹಿಸಿ, ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಒಂದು ಚಿಕ್ಕ ಸ್ಮಾರಕವನ್ನೂ ನಿರ್ಮಿಸಲಾಗುವುದು" ಎಂದು ತಿಳಿಸಿದ್ದಾರೆ.