ನವದೆಹಲಿ, ಜ.15 (DaijiworldNews/PY): ಸೇನಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಧರಿಗೆ ಶುಭಾಶಯ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಸೇನಾ ದಿನದಂದು ದೇಶದ ಪ್ರಬಲ ಸೈನಿಕರು ಹಾಗೂ ಅವರ ಕುಟುಂಬದವರಿಗೆ ಅಭಿನಂದನೆ ತಿಳಿಸುತ್ತೇನೆ. ನಮ್ಮ ಸೇನಾ ಪಡೆಯು ಶಕ್ತಿಶಾಲಿ, ಧೈರ್ಯಶಾಲಿ ಹಾಗೂ ದೃಢ ನಿಶ್ಚಯದಿಂದ ಕೂಡಿದ್ದು, ದೇಶದ ಜನರನ್ನು ಹೆಮ್ಮೆಪಡುವಂತೆ ಮಾಡಿದೆ. ನಾನು ಎಲ್ಲಾ ದೇಶವಾಸಿಗಳ ಪರವಾಗಿ ಭಾರತೀಯ ಸೇನೆಗೆ ವಂದಿಸುತ್ತೇನೆ" ಎಂದು ತಿಳಿಸಿದ್ದಾರೆ.
1989ರ ಜ.15ರಂದು ಫೀಲ್ಡ್ ಮಾರ್ಶಲ್ ಕೋಡಂದೆರ ಮಾದಪ್ಪ ಕಾರಿಯಪ್ಪ ಅವರು ಭಾರತೀಯ ಸೈನ್ಯದ ಪ್ರಥಮ ಪ್ರಧಾನ ದಂಡನಾಯಕರಾಗಿ ಅಧಿಕಾರವಹಿಸಿಕೊಂಡರು. ಬ್ರಿಟಿಷರು ಸೇನೆಯ ಅಧಿಕಾರವನ್ನು ಹಸ್ತಾಂತರಿಸಿದ ಈ ದಿನವನ್ನು ಸೇನಾ ದಿನ ಎಂದು ಆಚರಿಸಲಾಗುತ್ತದೆ.