ಭೋಪಾಲ್, ಜ.14 (DaijiworldNews/PY): "ಪಶ್ಚಿಮ ಬಂಗಾಳದಲ್ಲಿ ಈ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ಧಾರ್ಮಿಕ ಸ್ವಾತಂತ್ರ್ಯ ಸುಗ್ರೀವಾಜ್ಞೆ 2020 ರೀತಿಯ ಕಾನೂನು ಅನ್ನು ಪಶ್ಚಿಮ ಬಂಗಾಳದಲ್ಲಿ ಕೂಡಾ ಅನುಷ್ಠಾನಗೊಳಿಸಲಾಗುವುದು" ಎಂದು ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ.
"ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ರೀತಿಯಾದ ಕಾನೂನನ್ನು ಅಲ್ಲಿಯೂ ಅನುಷ್ಠಾನಗೊಳಿಸಲು ಮುಖ್ಯಮಂತ್ರಿಯವರಿಗೆ ಹೇಳುತ್ತೇನೆ" ಎಂದಿದ್ದಾರೆ.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಲವ್ ಜಿಹಾದ್ ಅನ್ನು ಉತ್ತೇಜಿಸುವವರನ್ನು ನೂತನ ಕಾಯ್ದೆ ಟಾರ್ಗೆಟ್ ಮಾಡುತ್ತದೆ. ಈ ಹಿಂದಿದ್ದ ಕಾನೂನಿನಲ್ಲಿ ಆರೋಪವಿದ್ದವರಿಗೆ ಜಾಮೀನು ದೊರಕುತ್ತಿತ್ತು. ಆದರೆ, ಅದನ್ನು ನಾವು ಜಾಮೀನುರಹಿತ ಅಪರಾಧವನ್ನಾಗಿಸಿದ್ದೇವೆ" ಎಂದು ತಿಳಿಸಿದ್ದಾರೆ.