ನವದೆಹಲಿ,ಜ.14 (DaijiworldNews/HR): ದೇಶದ ವಿಜ್ಞಾನಿಗಳ ಬಗ್ಗೆ ಕೆಲವು ಮುಸ್ಲಿಮರಿಗೆ ನಂಬಿಕೆಯಿಲ್ಲ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಗೀತ್ ಸೋಮ್ ಹೇಳಿದ್ದಾರೆ.
ಕೊರೊನಾ ಲಸಿಕೆ ಕುರಿತು ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, "ಕೆಲವು ಮುಸ್ಲಿಮರಿಗೆ ದೇಶದ ವಿಜ್ಞಾನಿಗಳು ಮತ್ತು ಪೊಲೀಸರ ಮೇಲೆ, ಪ್ರಧಾನ ಮಂತ್ರಿಯ ಮೇಲೆ ನಂಬಿಕೆಯಿಲ್ಲ. ಬದಲಾಗಿ ಅವರಿಗೆ ಪಾಕಿಸ್ತಾನದ ಮೇಲೆ ನಂಬಿಕೆಯಿದೆ. ಅವರು ಅಲ್ಲಿಗೆ ಹೋಗಬಹುದು. ಆದರೆ ವಿಜ್ಞಾನಿಗಳ ಬಗ್ಗೆ ಅನುಮಾನಪಡುತ್ತಾರೆ" ಎಂದರು.
ಇನ್ನು "ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿರುವವರು ರೈತರಲ್ಲ, ಬದಲಾಗಿ ಅಲ್ಲಿ ಧರಣಿ ನಡೆಸುತ್ತಿರುವವರು ರೈತ ವಿರೋಧಿಗಳು" ಎಂದು ಹೇಳಿದ್ದಾರೆ.