ಬೆಳಗಾವಿ,ಜ.14 (DaijiworldNews/HR): "ಯೋಗೇಶ್ವರ್ ಅವರು ಅಂದು ತಮ್ಮ ಮನೆಯ ಮೇಲೆ ಒಂಬತ್ತು ಕೋಟಿ ರೂ. ಸಾಲ ಮಾಡಿಕೊಂಡು ನಮ್ಮನ್ನು ಒಗ್ಗೂಡಿಸುವ ಕೆಲಸ ಯಾಕೆ ಮಾಡಬೇಕಿತ್ತು? ಎಂ.ಟಿ.ಬಿ ನಾಗರಾಜ್ ಕಡೆಯಿಂದ ಸಿ.ಪಿ ಯೋಗೇಶ್ವರ್ ಅಂದು ಸಾಲ ತಂದಿದ್ದರು, ಇದು ಯಾಕೆ ಬೇಕಿತ್ತು? ಈಗ ಮಾತನಾಡುವವರು ಆಗ ಎಲ್ಲಿದ್ದರು" ಎಂದು ಸಚಿವ ರಮೇಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಸಿಕ್ಕಿರುವುದು ಸರಿಯಾಗಿದೆ, ಈ ಸರ್ಕಾರದ ರಚನೆಯಲ್ಲಿ ಯೋಗೇಶ್ವರ್ ಪಾತ್ರ ಬಹಳ ಪ್ರಮುಖವಾಗಿದೆ" ಎಂದರು.
ಇನ್ನು ಭ್ರಷ್ಟರಿಗೆ ರಮೇಶ್ ಜಾರಕಿಹೊಳಿ ಸಾಥ್ ಕೊಡುತ್ತಿದ್ದಾರೆ ಎಂಬ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ವಿಶ್ವನಾಥ್ ಮಾತಾಡಿರುವುದು ನಮಗೆ ಆಶೀರ್ವಾದ ಅದರ ಬಗ್ಗೆ ನೋ ಕಮೆಂಟ್ಸ್" ಎಂದು ಹೇಳಿದ್ದಾರೆ.