ಮುಂಬೈ, ಜ.14 (DaijiworldNews/PY): "ನೂತನ ಕೃಷಿ ಕಾಯ್ದೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ರದ್ದುಗೊಳಿಸಬೇಕು" ಎಂದು ಶಿವಸೇನಾ ಮನವಿ ಮಾಡಿದೆ.
ಈ ವಿಚಾರದ ಬಗ್ಗೆ ಶಿವಸೇನಾ ಪಕ್ಷದ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಉಲ್ಲೇಖಿಸಿದ್ದು, "ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು. ಇದರಿಂದ ಪ್ರಧಾನಿ ಮೋದಿ ಅವರ ವರ್ಚಸ್ಸು ವೃದ್ಧಿಸಲಿದೆ" ಎಂದಿದೆ.
ಮೂರು ಕೃಷಿ ಕಾಯ್ದೆಗಳ ಜಾರಿಗೆ ಮುಂದಿನ ಆದೇಶದವರೆಗೆ ತಡೆಯಾಜ್ಞೆ ನೀಡಿರುವ ಸುಪ್ರೀಂ ಕೋರ್ಟ್, ಪ್ರತಿಭಟನಾ ನಿರತರಾದ ರೈತರ ಸಮಸ್ಯೆಯನ್ನು ಬಗೆಹರಿಸಲು ನಾಲ್ಕು ಸದಸ್ಯರ ತಂಡವನ್ನು ರಚನೆ ಮಾಡಲು ತೀರ್ಮಾನ ಮಾಡಿದೆ.
"ಪ್ರತಿಭಟನೆ ನಡೆಸುತ್ತಿರುವ ರೈತರ ಧೈರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಗತಿಸಬೇಕು" ಎಂದು ಸಲಹೆ ನೀಡಿದೆ.
"ಪರಿಸ್ಥಿತಿ ನಿಯಂತ್ರಣದಲ್ಲಿರಬೇಕು ಎಂದು ಸರ್ಕಾರ ಇಚ್ಛಿಸುವುದಾದರೆ ರೈತರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು" ಎಂದು ರೈತರ ಸಂಘಟನೆಗಳು ಜ.26 ಗಣರಾಜ್ಯೋತ್ಸವದಂದು ಆಯೋಜಿಸಿರುವ ಟ್ರ್ಯಾಕ್ಟರ್ ರ್ಯಾಲಿಯನ್ನುದ್ದೇಶಿಸಿ ತಿಳಿಸಿದೆ.
"ಇಲ್ಲಿಯವರೆಗೆ ಪ್ರತಿಭಟನೆಯಮ್ಮು 60-65 ಮಂದಿ ಸಾವನ್ನಪ್ಪಿದ್ದಾರೆ. ಸ್ವಾತಂತ್ರ್ಯ ಬಳಿ ದೇಶವು ಇಷ್ಟೊಂದು ಶಿಸ್ತುಬದ್ಧವಾದ ಆಂದೋಲನವನ್ನು ನೋಡಿಲ್ಲ" ಎಂದು ಶಿವಸೇನಾ ತಿಳಿಸಿದೆ.