ಲಕ್ನೋ, ಜ. 14 (DaijiworldNews/MB) : ''ಅಸಾದ್ದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ ಯುಪಿ, ಬಂಗಾಳದಲ್ಲಿ ಸ್ಪರ್ಧಿಸಿದರೆ ಬಿಹಾರದಂತೆ ಉತ್ತರ ಪ್ರದೇಶ, ಪಶ್ಚಿಮಬಂಗಾಳದ ಚುನಾವಣೆಯಲ್ಲಿಯೂ ಗೆಲುವು ಸಾಧಿಸಲು ನೆರವಾಗಲಿದೆ'' ಎಂದು ಬಿಜೆಪಿ ಸಂಸದರೊಬ್ಬರು ಹೇಳಿದರು.
ಉತ್ತರಪ್ರದೇಶದಲ್ಲಿ ಹೈದರಾಬಾದ್ ಸಂಸದರ ಉಪಸ್ಥಿತಿಯ ಬಗ್ಗೆ ಮಾಧ್ಯಮ ಪ್ರಶ್ನೆ ಕೇಳಿದ ಸಂದರ್ಭ ಪ್ರತಿಕ್ರಿಯಿಸಿದ ಲೋಕಸಭೆಯಲ್ಲಿ ಉನ್ನಾವೊ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಾಕ್ಷಿ ಮಹಾರಾಜ್, ''ದೇವರು ಅವರಿಗೆ ಶಕ್ತಿ ನೀಡಲಿ. ನಮಗೆ ಅವರು ಬಿಹಾರದಲ್ಲಿ ನೆರವಾದರು. ಉತ್ತರಪ್ರದೇಶ ಹಾಗೂ ಪಶ್ಚಿಮಬಂಗಾಳದಲ್ಲೂ ಚುನಾವಣೆಯಲ್ಲಿ ಗೆಲ್ಲಲು ಅವರು ನಮಗೆ ನೆರವಾಗಲಿದ್ದಾರೆ'' ಎಂದು ಹೇಳಿದ್ದಾರೆ.
ಬಿಜೆಪಿ ಸಂಸದನ ಈ ಹೇಳಿಯು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಓವೈಸಿಯ ಪಕ್ಷವು ಬಿಜೆಪಿಯ 'ಬೀ ಟೀಮ್' ಎಂದು ಆರೋಪಿಸಲಾಗಿದೆ.