ಪಾಟ್ನಾ, ಜ.14 (DaijiworldNews/PY): "ಬಿಹಾರ ರಾಜ್ಯದ ಆಡಳಿತವನ್ನು ಗೂಂಡಾಗಳು ನಡೆಸುತ್ತಿದ್ದಾರೆ. ಬಿಹಾರದ ಆಡಳಿತವನ್ನು ಕೆಟ್ಟವರ ಕೈಗೆ ನೀಡಿದ್ದೇವೆ" ಎಂದು ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ವಾಗ್ದಾಳಿ ನಡೆಸಿದ್ದಾರೆ.
ಪಾಟ್ನಾದಲ್ಲಿ ಮಾತನಾಡಿದ ಅವರು, "ಬಿಹಾರ ಸರ್ಕಾರದ ಆಡಳಿತವನ್ನು ಗೂಂಡಾಗಳು ನಡೆಸುತ್ತಿದ್ದಾರೆ" ಎಂದು ಹರಿಹಾಯ್ದಿದ್ದಾರೆ.
"ಅತ್ಯಾಚಾರ ಸೇರಿದಂತೆ ಕೊಲೆ, ದರೋಡೆ ಭ್ರಷ್ಟಾಚಾರ ಇನ್ನು ಕೂಡಾ ನಿಯಂತ್ರಣಕ್ಕೆ ಬಂದಿಲ್ಲ. ಆದರೂ ಕೂಡಾ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಂತ್ರಸ್ತರ ಕುಟುಂಬದವರೊಂದಿಗೆ ಮಾತನಾಡಲು ಇಚ್ಛಿಸುತ್ತಿಲ್ಲ" ಎಂದಿದ್ದಾರೆ.
"ಜಂಗಲ್ ರಾಜ್ಯದ ಮಹಾರಾಜರು ಏಕೆ ಈಗ ಮೌನವಾಗಿದ್ದಾರೆ. ಬಿಹಾರ ಸರ್ಕಾರದಲ್ಲಿ ಯಾರಿಗೂ ಕೂಡಾ ಸುರಕ್ಷತೆ ಇಲ್ಲ. ಗೂಂಡಾಗಳು ಆಡಳಿತ ನಡೆಸುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.