ಬೆಂಗಳೂರು, ಜ.14 (DaijiworldNews/PY): "ಮಂತ್ರಿಯಾಗಲು ನಾನೇ ಒಂದು ವರ್ಷ ಕಾದಿದ್ದೆ. ಆದರೆ, ಈಗ ಮಂತ್ರಿಯಾಗಿದ್ದೇನೆ. ಮುಂಬರುವ ದಿನಗಳಲ್ಲಿ 224 ಮಂದಿಯೂ ಕೂಡಾ ಮಂತ್ರಿಯಾಗಲಿದ್ದಾರೆ" ಎಂದು ನೂತನ ಸಚಿವ ಉಮೇಶ್ ಕತ್ತಿ ತಿಳಿಸಿದರು.
ವಿಧಾನಸೌಧದಲ್ಲಿ ಕಛೇರಿ ಪೂಜೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೋರ್ಟ್ ವಿಚಾರಕ್ಕೆ ಸಂಬಂಧಪಟ್ಟಂತೆ ಮುನಿರತ್ನ ಅವರಿಗೆ ತಡೆಯಿದೆ. ಆ ವಿಚಾರ ಸರಿಯಾದ ಬಳಿಕ ಅವರೂ ಕೂಡಾ ಸಚಿವರಾಗಲಿದ್ದಾರೆ" ಎಂದರು.
"ಇಲ್ಲಿಯವರೆಗೆ ನನಗೆ ಯಾವುದೇ ಇಲಾಖೆ ಹಂಚಿಕೆಯಾಗಿಲ್ಲ. ಹಂಚಿಕೆಯಾದ ಬಳಿಕ ನಾನು ಉತ್ತಮವಾಗಿ ಕಾರ್ಯ ನಿರ್ವಹಿಸುವೆ. ಈ ಹಿಂದೆ ಹಲವು ಇಲಾಖೆಗಳಲ್ಲಿ ಸಚಿವನಾಗಿ ಕಾರ್ಯ ನಿರ್ವಹಿಸಿದ್ದೇನೆ. ಮುಖ್ಯಮಂತ್ರಿ ಅವರು ಯಾವ ಖಾತೆ ಕೊಟ್ಟರೂ ಕೂಡಾ ನಾನು ನಿಭಾಯಿಸಬಲ್ಲೆ" ಎಂದು ಹೇಳಿದರು.
ಬ್ಲಾಕ್ ಮೇಲ್ ಮಾಡಿ ಮಂತ್ರಿಯಾಗಿದ್ದಾರೆ ಎನ್ನುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, "ಇಂದು ಮಕರ ಸಂಕ್ರಮಣವಾದ್ದರಿಂದ ಒಳ್ಳೆಯ ಕೆಲಸ, ಒಳ್ಳೆಯ ಯೋಚನೆ ಮಾಡಿ" ಎಂದರು.