ಡೆಹ್ರಾಡೂನ್,ಜ.14 (DaijiworldNews/HR): 2021ರ ಕುಂಭಮೇಳದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜನರ ಸುರಕ್ಷತೆಗಾಗಿ ಹರಿದ್ವಾರಕ್ಕೆ ಎನ್ಎಸ್ಜಿ ಕಮಾಂಡೋಸ್ ಗಳನ್ನು ಕಳುಹಿಸಲಾಗುವುದು ಎಂದು ಉತ್ತರಾಖಂಡ್ ಸರ್ಕಾರ ತಿಳಿಸಿದೆ.
ಸಾಂಧರ್ಭಿಕ ಚಿತ್ರ
2021ರ ಕುಂಭಮೇಳ ಸಂದರ್ಭದಲ್ಲಿ ಎನ್ಎಸ್ಜಿಯನ್ನು ಕಳುಹಿಸುವ ಕುರಿತು ಎನ್ಎಸ್ಜಿ ಮೇಜರ್ ಜನರಲ್ ವಿಎಸ್ ರಾನಡೆ ಅವರು ಉತ್ತರಾಖಂಡ್ ಪೊಲೀಸ್ ಕಮೀಷನರ್ ಅಶೋಕ್ ಕುಮಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು "ದೇಶ ವಿರೋಧಿ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕುಂಭಮೇಳದ ಸಂದರ್ಭದಲ್ಲಿ ಎನ್ಎಸ್ಜಿಯ ಎರಡು ತಂಡಗಳನ್ನು ಕಳುಹಿಸಲಾಗುವುದು ಎಂದು ಅಶೋಕ್ ಕುಮಾರ್ ತಿಳಿಸಿದ್ದು, ಎನ್ಎಸ್ಜಿ ತಂಡ ನಮ್ಮ ಭಯೋತ್ಪಾದಕ ನಿಗ್ರಹ ದಳಕ್ಕೂ ತರಬೇತಿ ನೀಡಲಿದೆ" ಎಂದು ಹೇಳಿದ್ದಾರೆ.