ಮಂಗಳೂರು, ಜ. 14 (DaijiworldNews/MB) : ಬಹುನಿರೀಕ್ಷಿತ ಕೊರೊನಾ ಲಸಿಕೆ ಕೋವಿಶೀಲ್ಡ್ ಗುರುವಾರ ಮುಂಜಾನೆ ಮಂಗಳೂರಿಗೆ ತಲುಪಿದೆ.
ಕೋವಿಶೀಲ್ಡ್ ಲಸಿಕೆಯನ್ನು ಹೊತ್ತ ಸ್ಪೈಸ್ ಜೆಟ್ ವಿಮಾನ ಪುಣೆ ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟಿತ್ತು. ಟ್ರಕ್ಗಳ ಮೂಲಕ ದೇಶದ 13 ಕಡೆಗಳಿಗೆ ಪುಣೆಯ ಸೆರಂ ಇನ್ಸ್ಟಿಟ್ಯೂಟ್ನಿಂದ ಕೊರೊನಾ ಲಸಿಕೆ ಪೂರೈಕೆಯಾಗಿತ್ತು.
ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಗುರುವಾರ ಮುಂಜಾನೆ ಮಂಗಳೂರಿನ ಡ್ರಗ್ ಲಾಜಿಸ್ಟಿಕ್ ಕೋವಿಶೀಲ್ಡ್ ಲಸಿಕೆ ಕೇಂದ್ರಕ್ಕೆ ಲಸಿಕೆ ತಲುಪಿದ್ದು ಇಲ್ಲಿಂದ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳು, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ರವಾನೆಯಾಗಲಿದೆ.
ಜನವರಿ 16 ರಂದು ಮೊದಲ ಹಂತದ ಲಸಿಕಾ ಅಭಿಯಾನ ನಡೆಯಲಿದೆ.