ಬೆಂಗಳೂರು, ಜ.14 (DaijiworldNews/PY): "ಯಾವ ಶಾಸಕರಿಗೆ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಅಸಮಾಧಾನವಿದೆಯೋ ಆ ಶಾಸಕರು ದೆಹಲಿಗೆ ಹೋಗಿ ಪಕ್ಷದ ವರಿಷ್ಠರಲ್ಲಿ ದೂರು ನೀಡಿ. ಈ ಬಗ್ಗೆ ನನಗೆ ಅಭ್ಯಂತರವಿಲ್ಲ" ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅತೃಪ್ತ ಶಾಸಕರು ಮನಸ್ಸಿಗೆ ಬಂದಂತೆ ಮಾತನಾಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂತ ಕೆಲಸವನ್ನು ಮಾಡಬಾರದು. ಯಾವುದೇ ಬೆಳವಣಿಗೆಯಾದಲ್ಲಿ ಕೂಡಾ ಪಕ್ಷದ ವರಿಷ್ಠರು ಸೂಕ್ತವಾದ ಕ್ರಮ ತೆಗೆದುಕೊಳ್ಳುತ್ತಾರೆ" ಎಂದು ತಿಳಿಸಿದ್ದಾರೆ.
"ಯಾವುದು ತಪ್ಪೋ ಅಥವಾ ಯಾವುದು ಸರಿ ಎನ್ನುವುದು ಪಕ್ಷದ ವರಿಷ್ಠರಿಗೆ ಗೊತ್ತಿದೆ. ನಮ್ಮ ಶಾಸಕರು ಸುಖಾಸುಮ್ಮನೆ ಹೇಳಿಕೆ ನೀಡುವ ಬದಲಾಗಿ ವರಿಷ್ಠರ ಬಳಿ ತೆರಳಿ ದೂರು ಸಲ್ಲಿಸಲಿ" ಎಂದಿದ್ದಾರೆ.