ನವದೆಹಲಿ,ಜ.14 (DaijiworldNews/HR) : ಮೊಬೈಲ್ ಆಪ್ ಹಾಗೂ ಆನ್ಲೈನ್ಗಳ ಮೂಲಕ ನೀಡಲಾಗುತ್ತಿರುವ ಡಿಜಿಟಲ್ ಸಾಲದ ಮೇಲೆ ಅಧ್ಯಯನ ನಡೆಸಲು ಆರ್ಬಿಐ ಸಮಿತಿಯೊಂದನ್ನು ರಚಿಸಿದೆ.
ಡಿಜಿಟಲ್ ಸಾಲ ನೀಡುವ ಚಟುವಟಿಕೆಗಳ ಅಧ್ಯಯನ ನಡೆಸಲು ಹಾಗೂ ಸೂಕ್ತವಾದ ನಿಯಂತ್ರಣ ವಿಧಾನ ಜಾರಿಗೆ ತರಲು ಈ ಸಮಿತಿ ರಚಿಸಲಾಗಿದೆ ಎಂದು ಆರ್ಬಿಐ ತಿಳಿಸಿದೆ.
ಇನ್ನು ಕೆಲವು ಆಪ್ಗಳು ಸಾಲ ಪಡೆದವರಿಗೆ ನೀಡುವ ಕಿರುಕುಳದಿಂದಾಗಿ ಕೆಲವರು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ವರದಿಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಚನೆಯಾಗಿರುವ ಆರ್ಬಿಐ ಸಮಿತಿಯಲ್ಲಿ ಆಂತರಿಕ ಸದಸ್ಯರಷ್ಟೇ ಅಲ್ಲದೇ, ಖಾಸಗಿ ಸೈಬರ್ ಭದ್ರತೆ ಸಂಸ್ಥೆಗಳ ಸದಸ್ಯರೂ ಇರಲಿದ್ದಾರೆ.
ತೆಲಂಗಾಣದ ಆಪ್ ಸಾಲ ಜಾಲ ಪ್ರಕರಣ ಸಂಬಂಧಿಸಿದಂತೆ ರಾಚಕೊಂಡ ಪೊಲೀಸರು ಒಬ್ಬ ಚೀನಿ ಪ್ರಜೆ ಸೇರಿದಂತೆ ಇಬ್ಬರನ್ನು ಬುಧವಾರ ಬಂಧಿಸಿದ್ದು, ಒಟ್ಟು ಆಪ್ ಸಾಲ ಪ್ರಕರಣದಲ್ಲಿ ನಾಲ್ವರು ಚೀನೀಯರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.