ಮಂಗಳೂರು, ಜ 13 (DaijiworldNews/SM): ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಸುಳ್ಯ ಶಾಸಕ ಎಸ್. ಅಂಗಾರ ಅವರಿಗೆ ಸಚಿವ ಸ್ಥಾನ ಲಭಿಸಿದೆ. ಆ ಮೂಲಕ ಬಿಎಸ್ ವೈ ಸಂಪುಟಕ್ಕೆ ಸಪ್ತ ಸಚಿವರ ಬಲ ಸಿಕ್ಕಿದಂತಾಗಿದೆ. ಹಿರಿತನದ ನೆಲೆಯಲ್ಲಿ ಅಂಗಾರ ಅವರಿಗೆ ಮಣೆ ಹಾಕಲಾಗಿದೆ.
ಇನ್ನು ಈಗಾಗಲೇ ಸಚಿವರಾಗಿ ಎಸ್. ಅಂಗಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.
ಅಂಗಾರ ಅವರ ಬಗ್ಗೆ ನಿಮಗೆಷ್ಟು ಗೊತ್ತು?
ಬರೋಬ್ಬರಿ 27 ವರ್ಷದ ಬಳಿಕ ಅಂಗಾರ ಅವರಿಗೆ ಸಚಿವ ಸ್ಥಾನ ದೊರಕಿದೆ. ಮೊದಲ ಬಾರಿಗೆ 1989ರಲ್ಲಿ ಅಂಗಾರ ಅವರು ಸ್ಪರ್ಧಿಸಿದ್ದು, 1989ರ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಕೆ. ಕುಶಲ ವಿರುದ್ಧ ಸ್ಪರ್ಧೆಯಲ್ಲಿ ಸೋಲು ಕಂಡಿದ್ದರು.
1994ರಲ್ಲಿ ನಡೆದ ಚುನಾವಣೆಯಲ್ಲಿ ಮೊದಲ ಜಯ ಗಳಿಸಿದ್ದ ಅಂಗಾರ
1994ರಲ್ಲಿ ಕುಶಲ ವಿರುದ್ಧ ಜಯಗಳಿಸಿದ್ದ ಅಂಗಾರ
1994ರಲ್ಲಿ ಅಧಿಕಾರದಲ್ಲಿದ್ದ ಜನಾದಳ- ದೇವೇಗೌಡ ಮುಖ್ಯಮಂತ್ರಿ ಆಗಿದ್ದರು
1999ರಲ್ಲಿ ಮತ್ತೊಂದು ಚುನಾವಣೆಯಲ್ಲಿ ಜಯ
2004ರ ಚುನಾವಣೆಯಲ್ಲಿ ಜಯ ಗಳಿಸಿದ್ದ ಅಂಗಾರ
2004ರಲ್ಲಿ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ
2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ
2006ರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ
2006ರಲ್ಲಿ ನಾಗರಾಜ್ ಶೆಟ್ಟಿ ಉಸ್ತುವಾರಿ ಸಚಿವರು
ಈ ಸಂದರ್ಭದಲ್ಲೂ ಅಂಗಾರ ಸಚಿವರಾಗುತ್ತಾರೆ ಎನ್ನುವ ಮಾತುಗಳಿತ್ತು
2008ರಲ್ಲಿ ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂತು
2008ರ ಚುನಾವಣೆಯಲ್ಲೂ ಜಯ ಗಳಿಸಿದ್ದ ಅಂಗಾರ
ಈ ಸಂದರ್ಭ ಕೂಡಾ ಹಿರಿತದ ಆಧಾರದಲ್ಲಿ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು
2008ರಲ್ಲಿ ಉಸ್ತುವಾರಿ ಸಚಿವರಾದ ಕೃಷ್ಣ ಜೆ ಪಾಲೇಮಾರ್
2011ರಲ್ಲಿ ಸದಾನಂದ ಗೌಡ ಮುಖ್ಯಮಂತ್ರಿ ಆದ ಸಂದರ್ಭ ತುಂಬಾ ನಿರೀಕ್ಷೆ ಇತ್ತು
ಡಿವಿ ಸಿಎಂ ಆದಾಗ ಅಂಗಾರ ಅವರಿಗೆ ಸಚಿವ ಸ್ಥಾನ ತೀವ್ರ ನಿರೀಕ್ಷೆ ಇತ್ತು
ಆದರೆ ಆ ಸಂದರ್ಭ ಕೂಡಾ ಅಂಗಾರ ಅವರಿಗೆ ಸಚಿವ ಸ್ಥಾನ ಕೈ ತಪ್ಪಿತ್ತು
2012ರಲ್ಲಿ ಶೆಟ್ಟರ್ ಮುಖ್ಯಮಂತ್ರಿ ಆದರು- ಆಗ ಕೂಡಾ ಅಂಗಾರ ಹೆಸರಿತ್ತು
ಕೊನೆ ಗಳಿಗೆಯಲ್ಲಿ ಸಚಿವ ಸ್ಥಾನ ಕೈ ತಪ್ಪಿತ್ತು- ಅಂಗಾರ ಬೆಂಬಲಿಗರು ಪ್ರತಿಭಟನೆ ಮಾಡಿದ್ದರು
2019ರಲ್ಲಿ ಮತ್ತೆ ಯಡಿಯೂರಪ್ಪ ಮುಖ್ಯಮಂತ್ರಿ
ಈ ಸಂದರ್ಭ ಕೂಡಾ ಅಂಗಾರ ಹೆಸರು ಮುಂಚೂಣಿಯಲ್ಲಿತ್ತು
ಎಲ್ಲಾ ಶಾಸಕರು ಈ ಸಂದರ್ಭ ಒಕ್ಕೊರಲಿನಿಂದ ಅಂಗಾರ ಹೆಸರು ಹೇಳಿದ್ದರು
ಇದೀಗ 2021ರಲ್ಲಿ ಕೊನೆಗೂ ಒಲಿದ ಸಚಿವ ಸ್ಥಾನದ ಪಟ್ಟ
ಬರೋಬ್ಬರಿ 27 ವರ್ಷದ ಬಳಿಕ ದೊರಕಿದ ಸಚಿವ ಸ್ಥಾನ
ಅಂಗಾರ ವಿಶೇಷತೆ ಏನು ಗೊತ್ತಾ?
6 ಬಾರಿ ಶಾಸಕರಾಗಿರುವ ಅಂಗಾರ
ಪ್ರತೀ ಬಾರಿ ಸಚಿವ ಸ್ಥಾನಕ್ಕೆ ಅಂಗಾರ ಹೆಸರು ಕೇಳಿ ಬರುತ್ತಿತ್ತು
ಆದರೆ ಪ್ರತೀ ಬಾರಿ ಕಡೇ ಕ್ಷಣದಲ್ಲಿ ಅಂಗಾರ ಹೆಸರು ಸಚಿವ ಸ್ಥಾನದಿಂದ ಕೈ ತಪ್ಪುತ್ತಿತ್ತು
ಆದರೆ ಸಚಿವ ಸ್ಥಾನ ಸಿಗಲಿಲ್ಲವೆಂದು ಯಾವುದೇ ಸಂದರ್ಭದಲ್ಲಿ ಕೂಡಾ ಗುಂಪುಗಾರಿಕೆ ಮಾಡಿದವರಲ್ಲ
ಸಚಿವ ಗಿರಿಗೆ ಲಾಬಿ ಕೂಡಾ ಮಾಡಿದವರಲ್ಲ
ಇದೀಗ ಅರ್ಹವಾಗಿಯೇ ದೊರಕಿರುವ ಸಚಿವ ಸ್ಥಾನ
ಕಡೆಗೋ ಹಿರಿತನಕ್ಕೆ, ನಿಷ್ಠಾವಂತ ಮಣೆ ಹಾಕಿದ ಬಿಜೆಪಿ
ಸುಳ್ಯದ ಇತಿಹಾಸದಲ್ಲೆ ಮೊದಲ ಬಾರಿಗೆ ಸಚಿವ ಸ್ಥಾನ
ಸುಳ್ಯದ ಇತಿಹಾಸದಲ್ಲಿ ಯಾರು ಕೂಡಾ ಇದುವರೆಗೆ ಸಚಿವರಾಗಿಲ್ಲ
4 ದಶಕಗಳಿಂದ ಮೀಸಲಾಗಿರುವ ಕ್ಷೇತ್ರ ಸುಳ್ಯ
ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಸುಳ್ಯ ಕ್ಷೇತ್ರ
ಆದರೆ ಯಾವುದೇ ಪಕ್ಷದಿಂದ ಸಚಿವ ಗಿರಿ ಸಿಕ್ಕಿರಲಿಲ್ಲ